Publish Date: Sun, 17 Oct 2021 (08:50 IST)
Updated Date: Sun, 17 Oct 2021 (09:13 IST)
ದುಬೈ: ಐಸಿಸಿ ಟಿ20 ವಿಶ್ವಕಪ್ ಮಹಾಕೂಟಕ್ಕೆ ಇಂದಿನಿಂದ ಚಾಲನೆ ಸಿಗಲಿದ್ದು, ಭಾರತದ ಆತಿಥ್ಯದಲ್ಲಿ ಯುಎಇನಲ್ಲಿ ಪಂದ್ಯಗಳು ನಡೆಯಲಿವೆ.
ಇಂದು ಮೊದಲ ಪಂದ್ಯದಲ್ಲಿ ಒಮನ್ ಮತ್ತು ಪಪುವಾ ನ್ಯೂ ಜೆನಿವಾ ತಂಡ ಪರಸ್ಪರ ಸೆಣಸಾಡಲಿವೆ. ಒಟ್ಟು 10 ತಂಡಗಳು ಪ್ರಧಾನ ಸುತ್ತಿನ ಪಂದ್ಯಗಳನ್ನು ಆಡಲಿದೆ. ಇದಕ್ಕೂ ಮೊದಲು ಎಂಟು ತಂಡಗಳ ನಡುವೆ ಅರ್ಹತಾ ಸುತ್ತಿನ ಪಂದ್ಯ ನಡೆಯಲಿದೆ. ಈ ಅರ್ಹತಾ ಸುತ್ತಿನಲ್ಲಿ ಗೆದ್ದ ಟಾಪ್ 2 ತಂಡಗಳು ಪ್ರಧಾನ ಸುತ್ತಿಗೆ ಅರ್ಹತೆ ಪಡೆಯಲಿದೆ.
ಸೆಮಿಫೈನಲ್ ಪಂದ್ಯಗಳು ನವಂಬರ್ 10 ಮತ್ತು 11 ರಂದು ನಡೆಯಲಿದ್ದು, 14 ರಂದು ಫೈನಲ್ ಪಂದ್ಯ ನಡೆಯಲಿದೆ. ಭಾರತ ಮೊದಲ ಪಂದ್ಯವನ್ನು ಅಕ್ಟೋಬರ್ 24 ರಂದು ಪಾಕಿಸ್ತಾನ ವಿರುದ್ಧ ಆಡಲಿದೆ. ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಪ್ರಕಾರ ಸಂಜೆ 7.30 ಕ್ಕೆ ಆರಂಭವಾಗಲಿದೆ.