Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ದುಬೈ: ಐಪಿಎಲ್ ಜಾತ್ರೆ ಮುಗಿದಿದ್ದು, ಇದೀಗ ಕ್ರಿಕೆಟ್ ಜಗತ್ತು ಮಿನಿ ವಿಶ್ವಕಪ್ ಮಹಾಸಮರಕ್ಕೆ ಸಿದ್ಧವಾಗುತ್ತಿದೆ. ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಓಪನರ್ ಗಳು ಯಾರಾಗಬಹುದು ಎಂಬ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.
ಟೀಂ ಇಂಡಿಯಾ ಓಪನರ್ ಆಗಿ ಈ ಹಿಂದೆ ಟಿ20 ಕ್ರಿಕೆಟ್ ಟೂರ್ನಿಗಳಲ್ಲಿ ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ ಓಪನಿಂಗ್ ಮಾಡಿದ್ದರು. ಆದರೆ ಟಿ20 ವಿಶ್ವಕಪ್ ನಲ್ಲಿ ಕೆಎಲ್ ರಾಹುಲ್ ಕೂಡಾ ಆಡುತ್ತಿರುವುದರಿಂದ ಭಾರತದ ಮಧ್ಯಮ ಕ್ರಮಾಂಕಕ್ಕೆ ಬಲ ಒದಗಿಸಲು ವಿರಾಟ್ ಕೊಹ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಬೇಕು ಎನ್ನುವುದು ಮಾಜಿ ಕ್ರಿಕೆಟಿಗರ ಒತ್ತಾಯ.
ಕೆಎಲ್ ರಾಹುಲ್ ಟಿ20 ಫಾರ್ಮ್ಯಾಟ್ ನಲ್ಲಿ ಅತ್ಯುತ್ತಮ ಕ್ರಿಕೆಟಿಗ. ಇತ್ತೀಚೆಗೆ ಐಪಿಎಲ್ ನಲ್ಲೂ ಗರಿಷ್ಠ ರನ್ ಸರದಾರನಾಗಿದ್ದರು. ಹೀಗಾಗಿ ಅವರನ್ನು ರೋಹಿತ್ ಜೊತೆಗೆ ಓಪನಿಂಗ್ ಕಳುಹಿಸಿ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದರೆ ತಂಡ ಸಮತೋಲನವಾಗುತ್ತದೆ ಎನ್ನುವುದು ಹಲವರ ಅಭಿಪ್ರಾಯ.