Publish Date: Sat, 31 Mar 2018 (07:54 IST)
Updated Date: Sat, 31 Mar 2018 (07:58 IST)
ಚೆನ್ನೈ: ಧೋನಿ ಸಾಮಾನ್ಯವಾಗಿ ತಮ್ಮ ಭಾವನೆಯನ್ನು ಬಹಿರಂಗವಾಗಿ ಹೊರ ಹಾಕುವವರಲ್ಲ. ಆದರೆ ನಿನ್ನೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಭಾವುಕರಾದರು.
ಎರಡು ವರ್ಷಗಳ ನಿಷೇಧ ಶಿಕ್ಷೆ ಮುಗಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೆ ಧೋನಿ ಮರಳುತ್ತಿದ್ದಾರೆ. ಈ ಕುರಿತಾದ ಕಾರ್ಯಕ್ರಮದಲ್ಲಿ ಮಾತನಾಡಿದ ಧೋನಿ ‘ನಾನು ಭಾರತ ತಂಡ ಮತ್ತು ಜಾರ್ಖಂಡ್ ಪರ ಹಲವು ಪಂದ್ಯಗಳನ್ನು ಆಡಿದ್ದೆ. ಅದು ಬಿಟ್ಟರೆ ಚೆನ್ನೈ ಸೂಪರ್ ಕಿಂಗ್ಸ್ ಪರ 8 ವರ್ಷ ಆಡಿದೆ. ಇದರ ನೆನಪು ಸದಾ ಹಸಿರು’ ಎಂದರು.
ನಂತರ ‘ಎಂಟು ವರ್ಷಗಳ ಬಳಿಕ ಮತ್ತೆ ಹಳದಿ ಜೆರ್ಸಿ ತೊಡುತ್ತಿದ್ದೇನೆ ಎನ್ನುವುದೇ ನನಗೆ ಖುಷಿಯ ವಿಷಯ’ ಎನ್ನುತ್ತಾ ಭಾವುಕರಾದರು. ಪುಣೆ ಇರಲಿ, ಸಿಎಸ್ ಕೆ ಇರಲಿ ನನ್ನ ಪರಿಪೂರ್ಣ ಆಟ ನೀಡಲು ಪ್ರಯತ್ನಿಸಿದ್ದೇನೆ ಎಂದು ಧೋನಿ ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ