Publish Date: Sat, 31 Mar 2018 (07:48 IST)
Updated Date: Sat, 31 Mar 2018 (07:49 IST)
ಮುಂಬೈ: ಬಾಲ್ ವಿರೂಪ ಪ್ರಕರಣದಲ್ಲಿ ಛೀಮಾರಿ ಹಾಕಿಸಿಕೊಂಡ ಬಳಿಕ ಅವಮಾನದಿಂದ ಕುಗ್ಗಿಹೋಗಿರುವ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಕ್ಯಾಮರೂನ್ ಬ್ಯಾನ್ ಕ್ರಾಫ್ಟ್ ಬಾರಿ ಬಾರಿ ಕ್ಷಮೆ ಯಾಚಿಸಿದ್ದಾರೆ.
ಸ್ಟೀವ್ ಸ್ಮಿತ್ ಅಂತೂ ಪತ್ರಿಕಾಗೋಷ್ಠಿಯಲ್ಲಿ ಗಳ ಗಳನೇ ಅತ್ತು ಬಿಟ್ಟಿದ್ದಾರೆ. ಇದೆಲ್ಲಾ ನೋಡಿದ ಮೇಲೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅಭಿಮಾನಿಗಳು ಮತ್ತು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.
‘ಅವರು ತಾವು ಮಾಡಿದ ತಪ್ಪಿಗೆ, ಪಶ್ಚಾತ್ತಾಪ ಪಡುತ್ತಿದ್ದಾರೆ, ಅಳುತ್ತಿದ್ದಾರೆ, ನೋವು ಅನುಭವಿಸುತ್ತಿದ್ದಾರೆ. ಅವರ ಕುಟುಂಬದ ಬಗ್ಗೆ ಸ್ವಲ್ಪ ಯೋಚಿಸಿ. ಈ ಕ್ರಿಕೆಟಿಗರ ಜತೆ ಅವರೂ ಎಲ್ಲಾ ನೋವು ಅನುಭವಿಸಬೇಕಿದೆ. ದಯವಿಟ್ಟು ಆ ಮೂವರನ್ನು ಅವರ ಪಾಡಿಗೆ ಇನ್ನಾದರೂ ಬಿಟ್ಟು ಬಿಡಿ. ಅವರಿಗೆ ಕೊಂಚ ಸಮಯ ಕೊಡಿ’ ಎಂದು ಸಚಿನ್ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ