Publish Date: Wed, 28 Mar 2018 (15:42 IST)
Updated Date: Wed, 28 Mar 2018 (15:44 IST)
ನವದೆಹಲಿ: ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಕಳಂಕಿತರಾಗಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮತ್ತು ಉಪ ನಾಯಕ ಡೇವಿಡ್ ವಾರ್ನರ್ ಇಬ್ಬರನ್ನೂ ಬಿಸಿಸಿಐ ಈ ವರ್ಷದ ಐಪಿಎಲ್ ನಿಂದ ಹೊರ ಹಾಕಿದೆ.
ಇಬ್ಬರೂ ಈಗಾಗಲೇ ತಮ್ಮ ತಮ್ಮ ತಂಡದ ನಾಯಕತ್ ಕಳೆದುಕೊಂಡಿದ್ದರು. ಸ್ಟೀವ್ ಸ್ಮಿತ್ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದರೆ, ವಾರ್ನರ್ ಹೈದರಾಬಾದ್ ತಂಡದ ಪರ ಆಡುತ್ತಿದ್ದರು. ಇಬ್ಬರೂ ನಾಯಕತ್ವಕ್ಕೆ ರಾಜೀನಾಮೆ ನೀಡಿ ಸಾಮಾನ್ಯ ಆಟಗಾರನಾಗಿ ಮುಂದುವರಿಯುವುದಾಗಿ ಹೇಳಿಕೊಂಡಿದ್ದರು. ಆದರೆ ಇದೀಗ ಇಬ್ಬರಿಗೂ ಬಿಸಿಸಿಐ ಗೇಟ್ ಪಾಸ್ ನೀಡಿದೆ.
ಹೀಗಾಗಿ ಈ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಇವರಿಬ್ಬರೂ ಆಡುತ್ತಿಲ್ಲ. ಇವರ ಬದಲಿಗೆ ಫ್ರಾಂಚೈಸಿಗಳಿಗೆ ಬದಲಿ ಆಟಗಾರನನ್ನು ನೀಡಲಾಗುವುದು ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ಇಬ್ಬರೂ ಕ್ರಿಕೆಟಿಗರಿಗೆ 12 ತಿಂಗಳ ನಿಷೇಧ ಶಿಕ್ಷೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ