ಪರ್ತ್: ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯ ಮೊದಲ ದಿನವೇ ಆಸೀಸ್ ಬ್ಯಾಟಿಗ ಡೇವಿಡ್ ವಾರ್ನರ್ ಶತಕ ಸಿಡಿಸಿ ಮಿಂಚಿದ್ದಾರೆ.
ಇದು ಡೇವಿಡ್ ವಾರ್ನರ್ ಪಾಲಿಗೆ ಕೊನೆಯ ಟೆಸ್ಟ್ ಪಂದ್ಯ ಎಂಬುದು ವಿಶೇಷ. ಈ ಮೂಲಕ ಕೊನೆಯ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಅಪರೂಪದ ಸಾಧನೆ ಮಾಡಿದ್ದಾರೆ. ಒಟ್ಟು 149 ಎಸೆತ ಎದುರಿಸಿರುವ ವಾರ್ನರ್ 111 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಆಸ್ಟ್ರೇಲಿಯಾ ಚಹಾ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ 210 ರನ್ ಗಳಿಸಿದೆ. ಇದಕ್ಕೆ ಮೊದಲು ಆರಂಭಿಕ ಉಸ್ಮಾನ್ ಖವಾಜ 41 ರನ್ ಗಳಿಸಿ ಔಟಾದರು. ನಂತರ ಬಂದ ಲಬುಶೇನ್ ಕೇವಲ 16 ರನ್ ಗಳಿಸಿ ಔಟಾದರು. ಇದೀಗ ವಾರ್ನರ್ ಜೊತೆಗೆ 21 ರನ್ ಗಳಿಸಿರುವ ಅನುಭವಿ ಬ್ಯಾಟಿಗ ಸ್ಟೀವ್ ಸ್ಮಿತ್ ಕ್ರೀಸ್ ನಲ್ಲಿದ್ದಾರೆ.
ಡೇವಿಡ್ ವಾರ್ನರ್ ಪಾಲಿಗೆ ಇದು 26 ನೇ ಟೆಸ್ಟ್ ಶತಕವಾಗಿದೆ. ಕೊನೆಯ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ಬಗ್ಗೆ ಮಾತನಾಡಿರುವ ವಾರ್ನರ್ ದಾಖಲೆಗಳ ಬಗ್ಗೆ ಯೋಚನೆ ಮಾಡಲ್ಲ. ನನ್ನ ತಂಡಕ್ಕಾಗಿ ರನ್ ಗಳಿಸುವದಷ್ಟೇ ನನ್ನ ಗುರಿ ಎಂದಿದ್ದಾರೆ.