Publish Date: Thu, 14 Dec 2023 (12:25 IST)
Updated Date: Thu, 14 Dec 2023 (12:45 IST)
ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದು ನಡೆಯಲಿರುವ ಟಿ20 ಪಂದ್ಯದಲ್ಲಿ ಕೆಲವು ಬದಲಾವಣೆಗಳು ಖಚಿತವಾಗಿದೆ.
ಕಳೆದ ಪಂದ್ಯ ಸೋತಿರುವ ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈ ಪಂದ್ಯವನ್ನು ಸೋತರೆ ಸರಣಿ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಟೀಂ ಇಂಡಿಯಾ ಅತ್ಯುತ್ತಮ ತಂಡವನ್ನೇ ಕಣಕ್ಕಿಳಿಸಬೇಕಾಗುತ್ತದೆ.
ನಾಯಕನಾಗಿ ಸೂರ್ಯಕುಮಾರ್ ಸ್ವತಃ ತಾವೇ ಬ್ಯಾಟಿಂಗ್ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಆದರೆ ಕಳೆದ ಪಂದ್ಯದಲ್ಲಿ ಆರಂಭಿಕರು ವಿಫಲರಾಗಿದ್ದರು. ಹೀಗಾಗಿ ಯಶಸ್ವಿ ಜೈಸ್ವಾಲ್ ಸ್ಥಾನಕ್ಕೆ ಇಶಾನ್ ಕಿಶನ್ ಗೆ ಸ್ಥಾನ ಸಿಗಬಹುದು. ಹೀಗಾದಲ್ಲಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಕೂಡಾ ಹೊರಹೋಗಲಿದ್ದು, ಅನುಭವಿ ಶ್ರೇಯಸ್ ಅಯ್ಯರ್ ಗೆ ಸ್ಥಾನ ನೀಡಬಹುದು.
ಬೌಲಿಂಗ್ ನಲ್ಲಿ ರವಿ ಬಿಷ್ಣೋಯ್ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರಿಗೆ ಅವಕಾಶ ಸಿಗುವ ಸಾಧ‍್ಯತೆಯಿದೆ. ವೇಗಿ ಅರ್ಷ್ ದೀಪ್ ಸಿಂಗ್ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದರೂ ಮತ್ತೊಂದು ಅವಕಾಶ ಸಿಗುವ ಸಾಧ‍್ಯತೆಯಿದೆ.