Publish Date: Thu, 14 Dec 2023 (10:50 IST)
Updated Date: Thu, 14 Dec 2023 (10:59 IST)
ಕೋಲ್ಕೊತ್ತಾ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಮುಂಬರುವ ದ.ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದ ಭಾಗವಾಗಿದ್ದಾರೆ.
ಏಕದಿನ ವಿಶ್ವಕಪ್ ಬಳಿಕ ಶಮಿ ಕ್ರಿಕೆಟ್ ನಿಂದ ದೂರವಿದ್ದಾರೆ. ಆದರೆ ಕೆಲವೇ ದಿನಗಳಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಶಮಿ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ವಿಶ್ವಕಪ್ ಆಡಿದ ಬಹುತೇಕ ಆಟಗಾರರಿಗೆ ಇದು ಕಮ್ ಬ್ಯಾಕ್ ಪಂದ್ಯವಾಗಲಿದೆ.
ಈ ಸರಣಿಗೆ ಮೊಹಮ್ಮದ್ ಶಮಿ ಈಗಾಗಲೇ ತಯಾರಿ ಆರಂಭಿಸಿದ್ದಾರೆ. ತಮ್ಮ ಫಾರ್ಮ್ ಹೌಸ್ ನಲ್ಲಿ ಶಮಿ ಅಭ್ಯಾಸ ನಡೆಸಲು ಕ್ರಿಕೆಟ್ ಪಿಚ್ ಮಾಡಿಸಿಕೊಂಡಿದ್ದಾರೆ. ಇಲ್ಲಿ ತಾವೇ ಖುದ್ದಾಗಿ ನೀರು ಹಾಯಿಸಿ ಪಿಚ್ ಸಮಗೊಳಿಸಿ ಅಭ್ಯಾಸಕ್ಕೆ ತಯಾರಿ ನಡೆಸಿದ್ದಾರೆ.
ಸದ್ಯಕ್ಕೆ ಟೀಂ ಇಂಡಿಯಾ ಆಫ್ರಿಕಾದಲ್ಲಿ ಟಿ20 ಮತ್ತು ಏಕದಿನ ಸರಣಿ ಆಡುತ್ತಿದ್ದು, ಅದಾದ ಬಳಿಕ ಡಿಸೆಂಬರ್ 26 ರಿಂದ ಮೊದಲ ಟೆಸ್ಟ್ ಆರಂಭವಾಗಲಿದೆ. ಹೀಗಾಗಿ ಮುಂದಿನ ವಾರ ಟೆಸ್ಟ್ ಆಡಲಿರುವ ಆಟಗಾರರು ಆಫ್ರಿಕಾ ಕಡೆಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ.