Publish Date: Fri, 02 Jun 2023 (16:31 IST)
Updated Date: Fri, 02 Jun 2023 (16:32 IST)
ಮುಂಬೈ: ಐಪಿಎಲ್ ಪಂದ್ಯಾವಳಿ ವೇಳೆ ಮೊಣಕಾಲಿನ ಗಾಯಕ್ಕೊಳಗಾಗಿದ್ದ ಸಿಎಸ್ ಕೆ ನಾಯಕ ಧೋನಿ ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.
ರಿಷಬ್ ಪಂತ್ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿದ್ದ ಅದೇ ವೈದ್ಯರು ಧೋನಿಗೂ ಶಸ್ತ್ರಚಿಕಿತ್ಸೆ ಮಾಡಿದ್ದರು. ಇದೀಗ ಧೋನಿ ಸುಧಾರಿಸಿಕೊಂಡಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎನ್ನಲಾಗಿದೆ.
ಇನ್ನು ಎರಡರಿಂದ ಮೂರು ತಿಂಗಳಲ್ಲಿ ಅವರು ಚೇತರಿಸಿಕೊಳ್ಳುವ ಸಾಧ‍್ಯತೆಯಿದೆ. ತಮ್ಮ ದೇಹ ಸಹಕರಿಸಿದರೆ ಮುಂದಿನ ಐಪಿಎಲ್ ನಲ್ಲೂ ಆಡುವುದಾಗಿ ಧೋನಿ ಹೇಳಿದ್ದರು.