Publish Date: Tue, 11 Jan 2022 (08:40 IST)
Updated Date: Tue, 11 Jan 2022 (09:13 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸುವ ಉತ್ಸಾಹದಲ್ಲಿರುವ ಟೀಂ ಇಂಡಿಯಾಗೆ ಬ್ಯಾಟಿಂಗೇ ಚಿಂತೆಯಾಗಿದೆ.
ಇತ್ತೀಚೆಗಿನ ದಿನಗಳಲ್ಲಿ ಭಾರತ ಹೈ ಸ್ಕೋರಿಂಗ್ ಪಂದ್ಯವಾಡಿಯೇ ಇಲ್ಲ. ಬ್ಯಾಟರ್ ಗಳು ಶತಕ ಗಳಿಸುವುದು ಅಪರೂಪವಾಗಿದೆ. ಒಬ್ಬ ಬ್ಯಾಟಿಗ ಸತತವಾಗಿ ರನ್ ಗಳಿಸಿರುವ ಉದಾಹರಣೆಯೇ ಇಲ್ಲ. ಹೀಗಾಗಿ ಕೋಚ್ ದ್ರಾವಿಡ್ ಗೆ ಬ್ಯಾಟರ್ ಗಳೇ ಚಿಂತೆಗೆ ಕಾರಣವಾಗಿದ್ದಾರೆ.
ನಾಯಕ ವಿರಾಟ್ ಕೊಹ್ಲಿಯಿಂದ ಹಿಡಿದು, ಚೇತೇಶ್ವರ ಪೂಜಾರ, ಅಜಿಂಕ್ಯಾ ರೆಹಾನೆ, ರಿಷಬ್ ಪಂತ್, ಮಯಾಂಕ್ ಅಗರ್ವಾಲ್ ಪ್ರತಿಯೊಬ್ಬರೂ ನಿಯಮಿತವಾಗಿ ರನ್ ಗಳಿಸುತ್ತಿಲ್ಲ. ಬ್ಯಾಟಿಂಗ್ ಸುಧಾರಣೆಯಾಗದೇ ಇದ್ದರೆ ಮೂರನೇ ಟೆಸ್ಟ್ ಗೆಲ್ಲುವುದು ಕಷ್ಟ. ಹೀಗಾಗಿ ಬ್ಯಾಟಿಂಗ್ ಕಡೆಗೆ ಹೆಚ್ಚಿನ ಗಮನ ಕೊಡಲು ದ್ರಾವಿಡ್ ತೀರ್ಮಾನಿಸಿದ್ದಾರೆ.