Publish Date: Sat, 03 Sep 2022 (11:02 IST)
Updated Date: Sat, 03 Sep 2022 (09:24 IST)
ದುಬೈ: ನಾಳೆ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಟೀಂ ಇಂಡಿಯಾ ಎದುರಿಸಬೇಕಿದೆ.
ನಿನ್ನೆ ಹಾಂಗ್ ಕಾಂಗ್ ವಿರುದ್ಧ ಪಾಕ್ ಜಯಗಳಿಸುವುದರೊಂದಿಗೆ ನಾಳೆ ಭಾರತದ ವಿರುದ್ಧ ಪಾಕಿಸ್ತಾನ ಆಡುವುದು ಖಚಿತವಾಗಿದೆ.
ಇದರ ಬೆನ್ನಲ್ಲೇ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಮೈದಾನಕ್ಕಿಳಿದು ಕಠಿಣ ಅಭ್ಯಾಸ ನಡೆಸಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಸೇರಿದಂತೆ ಇಡೀ ಭಾರತೀಯ ತಂಡ ನೆಟ್ ಪ್ರಾಕ್ಟೀಸ್ ನಡೆಸಿತು.