ಅಕ್ಟೋಬರ್ 7ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಗೆ ಟೀಮ್ ಇಂಡಿಯಾ ಪ್ರಕಟಿಸಲಾಗಿದೆ. ಶಿಖರ್ ಧವನ್, ಆಶೀಶ್ ನೆಹ್ರಾ ಕಮ್ ಬ್ಯಾಕ್ ಮಾಡಿದ್ದು, ರಹಾನೆಯನ್ನ ಹೊರಗಿಡಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಿಂದ ಶಿಖರ್ ಧವನ್ ಅವರನ್ನ ಹೊರಗಿಟ್ಟು ಅಜಿಂಕ್ಯ ರಹಾನೆ ಚಾನ್ಸ್ ನೀಡಲಾಗಿತ್ತು. ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ ರಹಾನೆ ಸತತ 4 ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಆದರೂ ಈಗ ರಹಾನೆಗೆ ಕೊಕ್ ನೀಡಿ ಧವನ್`ಗೆ ಚಾನ್ಸ್ ನೀಡಲಾಗಿದೆ. ಟೀಮ್ ಇಂಡಿಯಾದ ಹಳೇ ಹುಲಿ, ಟಿ-20 ಸ್ಪೆಶಲಿಸ್ಟ್ ಆಶೀಶ್ ನೆಹ್ರಾ ಮತ್ತು ವೆಸ್ಟ್ ಇಂಡೀಸ್ ಸರಣಿಯಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದ ದಿನೇಶ್ ಕಾರ್ತಿಕ್ ಸಹ ಸ್ಥಾನ ಪಡೆದಿದ್ಧಾರೆ.
ಸದ್ಯ, ಟಿ-20 ಶ್ರೇತಾಂಕದಲ್ಲಿ 5ನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾ 3 ಪಂದ್ಯಗಳ ಟಿ-20 ಸರಣಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಮೇಲೇರುವ ಗುರಿ ಹೊಂದಿದೆ.
ಟಿ-20 ಸರಣಿಗೆ 15 ಸದಸ್ಯರ ಭಾರತ ತಂಡ ಇಂತಿದೆ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪ ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ಮನೀಶ್ ಪಾಂಡೆ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಎಂ.ಎಸ್. ಧೋನಿ, ಹಾರ್ದಿಕ್ ಪಾಂಡ್ಯಾ, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಆಶಿಶ್ ನೆಹ್ರಾ, ಅಕ್ಷರ್ ಪಟೇಲ್
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ