Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತದ ವಿರುದ್ಧದ ಹೀನಾಯ ಸೋಲು: ಶ್ರೀಲಂಕಾ ಆಯ್ಕೆ ಸಮಿತಿ ರಾಜೀನಾಮೆ

ಭಾರತದ ವಿರುದ್ಧದ ಹೀನಾಯ ಸೋಲು: ಶ್ರೀಲಂಕಾ ಆಯ್ಕೆ ಸಮಿತಿ ರಾಜೀನಾಮೆ
ಕೊಲಂಬೋ , ಮಂಗಳವಾರ, 29 ಆಗಸ್ಟ್ 2017 (20:11 IST)
ಭಾರತ ವಿರುದ್ಧದ ಟೆಸ್ಟ್ ಸರಣಿ ಮತ್ತು ಏಕದಿನ ಸರಣಿಗಳಲ್ಲಿ ಹೀನಾಯ ಸೋಲು ಕಂಡ ಬಳಿಕ ಸನತ್ ಜಯಸೂರ್ಯ ನೇತೃತ್ವದ ಶ್ರೀಲಂಕಾ ಕ್ರಿಕೆಟ್ ಆಯ್ಕೆ ಸಮಿತಿ ಸದಸ್ಯರು ರಾಜೀನಾಮೆ ನೀಡಿದ್ದಾರೆ.
 

ಟೆಸ್ಟ್ ಸರಣಿಯಲ್ಲಿ 0-3 ಅಂತರದಿಂದ ಸೋತು ಶ್ರೀಲಂಕಾ ತಂಡ ಮುಖಭಂಗ ಅನುಭವಿಸಿತು. 5 ಪಂದ್ಯಗಳ ಏಕದಿನ ಸರಣಿಯಲ್ಲೂ 3ರಲ್ಲಿ ಸೋತು ಸರಣಿ ಕೈಚೆಲ್ಲಿ ಕುಳಿತಿದೆ. ಹೀಗಾಗಿ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಇದೇ ಆಯ್ಕೆ ಸಮಿತಿ ಮುಂದಿನ ಎರಡು ಏಕದಿನ ಪಂದ್ಯಗಳು ಮತ್ತು ಏಕೈಕ ಟಿ-20 ಪಂದ್ಯಕ್ಕೂ ತಂಡವನ್ನ ಆಯ್ಕೆ ಮಾಡಿದೆ. ಸೆಪ್ಟೆಂಬರ್ 6ರಂದು ಅಧಿಕೃತವಾಗಿ ಹೊರ ಹೋಗಲಿದ್ದಾರೆ.

ಆಯ್ಕೆ ಸಮಿತಿ ಮುಖ್ಯಸ್ಥ ಸನತ್ ಜಯಸೂರ್ಯ, ಸದಸ್ಯರಾದ ರಂಜೀತ್ ಮಧುರಸಿಂಘೆ, ರೋಮೆಶ್ ಕಲುವಿತರನಾ, ಅಸಂಕ ಗುರುಸಿನ್ಹಾ, ಎರಿಕ್ ಉಪಾಶಾಂತಾ ರಾಜೀನಾಮೆ ಮುಂದಾಗಿರುವುದಾಗಿ ಕ್ರೀಡಾ ಸಚಿವಾಲಯ ತಿಳಿಸಿದೆ.

ಎರಡು ತಿಂಗಳ ಹಿಂದಷ್ಟೇ ಜಯಸೂರ್ಯ ನೇತೃತ್ವದ ಆಯ್ಕೆ ಸಮಿತಿಯ ಅಧಿಕಾರಾವಧಿಯನ್ನ 6 ತಿಂಗಳ ಕಾಲ ವಿಸ್ತರಿಸಲಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಸರಣಿ ಸೋಲು. ಬಾಂಗ್ಲಾ ವಿರುದ್ಧದ ಕಳಪೆ ಪ್ರದರ್ಶನದ ಜೊತೆಗೆ ಭಾರತ ವಿರುದ್ಧದ ಹೀನಾಯ ಸೋಲು ಆಯ್ಕೆ ಸಮಿತಿಯ ಬಲವಂತದ ರಾಜೀನಾಮೆಗೆ ಕಾರಣ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೊಹಮ್ಮದ್ ಶಮಿ ಮಗಳ ಜೊತೆ ವಿರಾಟ್ ಕೊಹ್ಲಿ ಡ್ಯಾನ್ಸ್.. ವೈರಲ್ ವಿಡಿಯೋ