Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಭಾರತಕ್ಕೆ 294 ರನ್ ಟಾರ್ಗೆಟ್ ಕೊಟ್ಟ ಆಸ್ಟ್ರೇಲಿಯಾ

ಭಾರತಕ್ಕೆ 294 ರನ್ ಟಾರ್ಗೆಟ್ ಕೊಟ್ಟ ಆಸ್ಟ್ರೇಲಿಯಾ
ಇಂಧೋರ್ , ಭಾನುವಾರ, 24 ಸೆಪ್ಟಂಬರ್ 2017 (17:45 IST)
ಇಂಧೋರ್`ನಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಭಾಂರತ ತಂಡ ಆಸ್ಟ್ರೇಲಿಯಾಗೆ 294 ರನ್`ಗಳ ಬೃಹತ್ ಗುರಿ ನೀಡಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರೋನ್ ಫಿಂಚ್ ಶತಕದ ನೆರವಿನಿಂದ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತ್ತು.

ಆರಂಭಿಕರಾದ ಆರೋನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ವೈಫಲ್ಯಗಳನ್ನ ಮೆಟ್ಟಿ ನಿಂತು ಉತ್ತಮ ಆರಂಭ ನೀಡಿದರು. ಭಾರತದ ಬೌಲರ್`ಗಳನ್ನ ಕಾಡಿದ ಈ ಜೋಡಿ 70 ರನ್ ಜೊತೆಯಾಟ ನೀಡಿತು. ವಾರ್ನರ್ 42 ರನ್`ಗಳಿಗೆ ನಿರ್ಗಮಿಸಿದಾಗ ಕ್ರೀಸ್`ಗೆ ಬಂದ ಕ್ಯಾಪ್ಟನ್ ಸ್ಟೀವನ್ ಸ್ಮಿತ್, ಆರೋನ್ ಫಿಂಚ್ ಜೊತೆ ಇನ್ನಿಂಗ್ಸ್ ಕಟ್ಟಿದರು. ವಿಕೆಟ್ ಪಡೆಯಲು ಬೌಲರ್`ಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಜೋಡಿ ತಂಡದ ಸ್ಕೋರ್ 300ರ ಗಡಿ ದಾಟಿಸುವ ಸೂಚನೆ ಕೊಟ್ಟಿತ್ತು. ಆದರೆ, ಕುಲದೀಪ್ ಯದವ್ 63 ರನ್ ಗಳಿಸಿದ್ದ ಸ್ಮಿತ್`ಗೆ ಪೆವಿಲಿಯನ್ ಹಾದಿ ತೋರುತ್ತಲೇಆಸೀಸ್ ಪತನ ಶುರುವಾಯ್ತು. ವಿಕೆಟ್ ಉರುಳುತ್ತಿದ್ದರೂ ಒಂದೆಡೆ ಉತ್ತಮ ಆಟವಾಡುತ್ತಿದ್ದ ಫಿಂಚ್ 124 ರನ್ ಸಿಡಿಸಿ ನಿರ್ಗಮಿಸಿದರು.

ಅಂತಿಮ ಓವರ್`ಗಳ ಮಧ್ಯಮ ಕ್ರಮಾಂಕದಿಂದ ಉತ್ತಮ ಆಟ ಬರದ ಕಾರಣ ಆಸ್ಟ್ರೇಲಿಯಾ ಸ್ಕೋರ್ 293ಕ್ಕೆ ನಿಂತು ಹೋಯ್ತು. ಅಂತಿಮ ಓವರ್`ಗಳಲ್ಲಿ ಆಸೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದ ಭಾರತೀಯ ಬೌಲರ್`ಗಳ 300ರ ಗಡಿಯೊಳಗೆ ನಿಯಂತ್ರಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪೋರ್ನ್ ನಟಿಗೆ ಶೇನ್ ವಾರ್ನ್ ಮಾಡಿದ್ದೇನು ಗೊತ್ತಾ..?