ನಾಗ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 5ನೇ ಏಕದಿನ ಪಂದ್ಯವನ್ನೂ ಗೆಲ್ಲುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಭಾರತದ ತಂಡ 4-1 ಅಂತರದಿಂದ ಏಕದಿನ ಸರಣಿ ಗೆದ್ದು ಬೀಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 4ನೇ ಪಂದ್ಯದಲ್ಲಿ ಭಾರತವನ್ನ ಸೋಲಿಸಿದ್ದ ಹುಮ್ಮಸ್ಸಿನಲ್ಲೇ ಬೃಹತ್ ಮೊತ್ತದ ಗುರಿ ಹೊಂದಿತ್ತು. ಆದರೆ, ಭಾರತದ ಶಿಸ್ತು ಬದ್ಧ ಬೌಲಿಂಗ್ ದಾಳಿಗೆ ಕಾಂಗರೂ ಬ್ಯಾಟ್ಸ್`ಮನ್`ಗಳು ನೆಲಕಚ್ಚಿದರು. ಆರಂತಕ ಸಿಡಿಸಿ ಉತ್ತಮ ಾರಂಭ ಒದಗಿಸಿದರು. ಆನಂತರ ಪಟಪಟನೆ ವಿಕೆಟ್ ಉರುಳಿದ್ದರಿಂದ ಆಸೀಸ್`ಗೆ ಹಿನ್ನಡೆಯಾಯಿತು. ಬಳಿಕ ಸ್ಟೋಯ್ನಿಸ್ ಮತ್ತು ಟ್ರ್ಯಾವಿಸ್ ಹೆಡ್ ತಂಡದ ಬೃಹತ್ ಮೊತ್ತಕ್ಕೆ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಅಂತಿಮವಾಗಿ ಆಸೀಸ್ 50 ಓವರ್`ಗಳಲ್ಲಿ 9 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಲಷ್ಟೇ ಶಕ್ತವಾಯ್ತು.
ಸಾಧಾರಣ ಗುರಿ ಬೆನ್ನತ್ತಿದ್ದ ಭಾರತಕ್ಕೆ ರೋಹಿತ್ ಶರ್ಮಾ ಮತ್ತು ಅಜಿಂಕ್ಯ ರಹಾನೆಯವರ ಯಶಸ್ವಿ ಆರಂಭಿಕ ಜೋಡಿ 124 ರನ್`ಗಳ ಜೊತೆಯಾಟ ನೀಡಿತು. ರಹಾನೆ 61 ರನ್`ಗೆ ನಿರ್ಗಮಿಸಿದ ಬಳಿಕ ರೋಹಿತ್ ಶರ್ಮಾ ಆರ್ಭಟ ಮುಂದುವರೆಸಿದರು. 109 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 11 ಬೌಂಡರಿ ಸಹಿತ 125 ರನ್ ಸಿಡಿಸಿದ ರೋಹಿತ್ ಶರ್ಮಾ ಆಸೀಸ್ ಬೌಲರ್`ಗಳ ಬೆವರಿಳಿಸಿದರು. ನಾಯಕ ಕೊಹ್ಲಿ ಸಹ 39 ರನ್ ಗಳಿಸಿ ರೋಹಿತ್`ಗೆಸಾಥ್ ನೀಡಿದರು. ಅಂತಿಮವಾಗಿ ಭಾರತ ತಂಡ 42.5 ಓವರ್`ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಅರ್ಹವಾಗಿಯೇ ರೋಹಿತ್ ಶರ್ಮಾಗೆ ಪಂದ್ರ ಶ್ರೇಷ್ಠ ಮತ್ತು ಹಾರ್ದಿಕ್ ಪಾಂಡ್ಯಾಗೆ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ