Publish Date: Wed, 27 Oct 2021 (08:55 IST)
Updated Date: Wed, 27 Oct 2021 (09:07 IST)
ದುಬೈ: ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ ಪಂದ್ಯದಲ್ಲಿ ಕಳಪೆ ನಿರ್ವಹಣೆ ತೋರಿ ಸಾಮಾಜಿಕ ಜಾಲತಾಣದಲ್ಲಿ ನಿಂದನೆಗೊಳಗಾಗಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಮಾಜಿ ಕೋಚ್ ಅನಿಲ್ ಕುಂಬ್ಳೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಶಮಿ ಬೆಂಬಲಿಸಿ ಟ್ವೀಟ್ ಮಾಡಿರುವ ಅನಿಲ್ ಕುಂಬ್ಳೆ, ನೀವು ಚಾಂಪಿಯನ್ ಬೌಲರ್ ಎಂದು ಹೊಗಳಿದ್ದಾರೆ. ಪಾಕ್ ವಿರುದ್ಧದ ಸೋಲಿಗೆ ಕೇವಲ ಶಮಿಯನ್ನು ಹೊಣೆಗಾರನಾಗಿ ಮಾಡಿ ನಿಂದಿಸಿದವರ ವಿರುದ್ಧ ಕುಂಬ್ಳೆ ಈ ರೀತಿ ಸಿಡಿದೆದ್ದಿದ್ದಾರೆ.
ಅನಿಲ್ ಕುಂಬ್ಳೆ ಜೊತೆಗೆ ಬಿಸಿಸಿಐ, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರು, ಪಾಕ್ ಕ್ರಿಕೆಟಿಗ ಮೊಹಮ್ಮದ್ ರಿಜ್ವಾನ್ ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾ ವೇಗಿಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.