ದುಬೈ: ವೆಸ್ಟ್ ಇಂಡೀಸ್ ವಿರುದ್ಧದ ನಿನ್ನೆಯ ಟಿ20 ವಿಶ್ವಕಪ್ ಪಂದ್ಯದಲ್ಲಿ ದ.ಆಫ್ರಿಕಾ ಕ್ರಿಕೆಟಿಗರಿಗೆ ಜನಾಂಗೀಯ ತಾರತಮ್ಯ ವಿರೋಧಿಸಿ ಮಂಡಿಯೂರಿ ನಿಲ್ಲುವ ಅಭಿಯಾನ ವಿರೋಧಿಸಿ ಕ್ವಿಂಟನ್ ಡಿ ಕಾಕ್ ಪಂದ್ಯದಿಂದಲೇ ಹಿಂದೆ ಸರಿದ ಘಟನೆ ನಡೆದಿದೆ.
ಈಗಾಗಲೇ ಟೀಂ ಇಂಡಿಯಾ ಸೇರಿದಂತೆ ಇತರ ತಂಡಗಳ ಕ್ರಿಕೆಟಿಗರೂ ಜನಾಂಗೀಯ ತಾರತಮ್ಯ ವಿರೋಧಿ ಅಭಿನಯಾನದಲ್ಲಿ ಕೈ ಜೋಡಿಸಿದ್ದರು. ಅದರಂತೆ ದ.ಆಫ್ರಿಕಾ ಕ್ರಿಕೆಟಿಗರಿಗೂ ಅಲ್ಲಿನ ಕ್ರಿಕೆಟ್ ಮಂಡಳಿ ನಿನ್ನೆಯ ಪಂದ್ಯದಲ್ಲಿ ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿತ್ತು.
ಅದರಂತೆ ಪಂದ್ಯಕ್ಕೆ ಮೊದಲು ಮಂಡಿಯೂರಿ ಕುಳಿತು ಜನಾಂಗೀಯ ತಾರತಮ್ಯದ ವಿರುದ್ಧ ಇತರ ಕ್ರಿಕೆಟಿಗರು ತಮ್ಮ ಬೆಂಬಲ ಸೂಚಿಸಿದ್ದರು. ಆದರೆ ಈ ಅಭಿಯಾನದ ಬಗ್ಗೆ ಸಹಮವಿಲ್ಲದ ಕಾರಣ, ಇಷ್ಟವಿಲ್ಲದ ಕೆಲಸ ಮಾಡಲಾರೆ ಎಂದು ಕ್ವಿಂಟನ್ ಡಿ ಕಾಕ್ ಪಂದ್ಯದಿಂದಲೇ ಹಿಂದೆ ಸರಿಯುವ ನಿರ್ಧಾರ ಕೈಗೊಂಡರು.