ಮುಂಬೈ: ಈ ವರ್ಷ ಟೀಂ ಇಂಡಿಯಾ ಪಾಲಿಗೆ ಅಷ್ಟೇನೂ ಹರ್ಷದಾಯಕವಾಗದೇ ಇದ್ದರೂ ವೈಯಕ್ತಿಕವಾಗಿ ಕ್ರಿಕೆಟಿಗರು ಅನೇಕ ದಾಖಲೆಗಳನ್ನು ಮಾಡಿದ್ದಾರೆ.
ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಸೇರಿದಂತೆ ಹಲವರು ಸ್ಮರಣೀಯ
ಇನಿಂಗ್ಸ್ ಆಡಿದ್ದಾರೆ.
ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ ನಲ್ಲಿ ಹೊಡೆದ 82 ರನ್, ಐರ್ಲೆಂಡ್ ವಿರುದ್ಧ ದೀಪಕ್ ಹೂಡಾ ಟಿ20 ಶತಕ, ಸೂರ್ಯಕುಮಾರ್ ಯಾದವ್ ಎರಡು ಶತಕಗಳು, ಏಷ್ಯಾ ಕಪ್ ನಲ್ಲಿ ಹಾರ್ದಿಕ್ ಪಾಂಡ್ಯ ಪಾಕ್ ವಿರುದ್ಧ ಆಡಿದ ಇನಿಂಗ್ಸ್, ಬಾಂಗ್ಲಾ ವಿರುದ್ಧ ಇಶಾನ್ ಕಿಶನ್ ಏಕದಿನ ದ್ವಿಶತಕ, ಕೈ ಗಾಯವಾಗಿದ್ದರೂ ಬಾಂಗ್ಲಾ ವಿರುದ್ಧ ರೋಹಿತ್ ಶರ್ಮಾ ಸಿಡಿಸಿದ ಅರ್ಧಶತಕ, ಸೋಲಿನ ಭೀತಿಯಲ್ಲಿದ್ದಾಗ ತಾಳ್ಮೆಯ 42 ರನ್ ಗಳಿಸಿ ಬಾಂಗ್ಲಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಗೆಲುವು ಕೊಡಿಸಿದ ರವಿಚಂದ್ರನ್ ಅಶ್ವಿನ್, ಇಂಗ್ಲೆಂಡ್ ವಿರುದ್ಧ ರಿಷಬ್ ಪಂತ್ ಹೊಡೆದ 125 ರನ್ ಗಳ ಇನಿಂಗ್ಸ್ ಈ ವರ್ಷದ ಸ್ಮರಣೀಯ ಇನಿಂಗ್ಸ್ ಗಳಲ್ಲಿ ಒಂದಾಗಿದೆ.