Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೋನಾ ಹುಟ್ಟು ಹಾಕಿದ ಹೊಸ ಮದುವೆ ಟ್ರೆಂಡ್

ಕೊರೋನಾ ಹುಟ್ಟು ಹಾಕಿದ ಹೊಸ ಮದುವೆ ಟ್ರೆಂಡ್
ಬೆಂಗಳೂರು , ಶುಕ್ರವಾರ, 5 ಜೂನ್ 2020 (09:29 IST)
ಬೆಂಗಳೂರು: ಸರಳ ಮದುವೆಯಾಗಬೇಕು ಎಂಬ ಆದರ್ಶವೆಲ್ಲಾ ಇಷ್ಟು ದಿನ ಕೇವಲ ಹೇಳುವುದಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಆಚರಿಸುವವರು ಕಡಿಮೆಯಾಗಿದ್ದರು. ಆದರೆ ಕೊರೋನಾ ಎಂಬ ಮಹಾಮಾರಿ ಜನರ ಮನಸ್ಥಿತಿಯನ್ನೇ ಬದಲಿಸಿದೆ.


ಸರ್ಕಾರ ಮದುವೆ, ಸಮಾರಂಭಗಳಿಗೆ ಕಡಿವಾಣ ಹಾಕಿದ ಪರಿಣಾಮ ಎಷ್ಟೋ ಜೋಡಿಗಳು ಸರಳವಾಗಿ ಕೇವಲ ಮನೆಯವರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಒಂದು ರೀತಿಯಲ್ಲಿ ಇದೀಗ ಟ್ರೆಂಡ್ ಆಗುತ್ತಿದೆ.

ಧಾಂ ಧೂಂ ಎಂದು ಮದುವೆ ಮಾಡಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದವರೆಲ್ಲಾ ಈಗ ಸರಳ ವಿವಾಹ ಆಕರ್ಷಣೆ ಎನಿಸತೊಡಗಿದೆ. ಆ ಹಣವನ್ನು ನಮ್ಮ ಭವಿಷ್ಯಕ್ಕೆ, ಉತ್ತಮ ಉದ್ದೇಶಕ್ಕೆ ಖರ್ಚು ಮಾಡಬಹುದಲ್ಲಾ ಎಂದು ಯೋಚನೆ ಮಾಡಲು ತೊಡಗಿದ್ದಾರೆ. ಹೀಗಾಗಿ ಸರಳ ಮದುವೆ ಒಂದು ಟ್ರೆಂಡ್ ಆಗುತ್ತಿದೆ.

ಮುಂದಿನ ದಿನಗಳಲ್ಲಿ ಸರ್ಕಾರವೇ ಮದುವೆ ಅದ್ಧೂರಿಯಾಗಿ ನಡೆಸಲು ಅನುಮತಿ ಕೊಟ್ಟರೂ ಕೊರೋನಾ ಭೀತಿಯಿಂದಲೋ, ಖರ್ಚು ಉಳಿಸುವ ದೃಷ್ಟಿಯಿಂದಲೋ ಒಂದಷ್ಟು ಜನರಾದರೂ ಸರಳ ಮದುವೆಗೆ ಮುಂದಾಗುವುದು ಖಂಡಿತಾ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಕುರಿತ ಸೆಲೆಬ್ರಿಟಿಗಳ ಜಾಗೃತಿ ಹಾಡು ಇಂದು ಬಿಡುಗಡೆ