Publish Date: Tue, 26 May 2020 (20:34 IST)
Updated Date: Tue, 26 May 2020 (20:36 IST)
ಲಾಕ್ ಡೌನ್ ನಾಲ್ಕನೇ ಹಂತ ಕೊನೆಗೊಳ್ಳುತ್ತಿರುವುದಕ್ಕೆ ದಿನಗಣನೆ ಆರಂಭಗೊಂಡಿರುವಂತೆ ಭಕ್ತರಿಗೆ ಸರಕಾರ ಗುಡ್ ನ್ಯೂಸ್ ಕೊಟ್ಟಿದೆ.
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವಂತಹ ದೇವಸ್ಥಾನಗಳನ್ನು ಭಕ್ತರಿಗೆ ತೆರೆಯಲು ಸರಕಾರ ಮುಂದಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ಸರಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿರುವ ಸರಳ ವಿವಾಹಕ್ಕೆ ಸರಕಾರ ಪ್ರೋತ್ಸಾಹ ನೀಡುತ್ತಿದೆ. 50 ಜನರಿಗೆ ಸೀಮಿತಗೊಳಿಸಿ ಸರಳ ವಿವಾಹ ಯೋಜನೆ ಮುಂದುವರಿಸಲಾಗುತ್ತದೆ ಎಂದಿದ್ದಾರೆ.