Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಝೂಮ್ ಆಪ್ ಗೆ ಪರ್ಯಾಯ ಭಾರತದ್ದೇ ಆಪ್ ತಯಾರಿಸಲು ಪ್ರೋತ್ಸಾಹ ಕೊಡಲಿದೆ ಕೇಂದ್ರ

ಝೂಮ್ ಆಪ್ ಗೆ ಪರ್ಯಾಯ ಭಾರತದ್ದೇ ಆಪ್ ತಯಾರಿಸಲು ಪ್ರೋತ್ಸಾಹ ಕೊಡಲಿದೆ ಕೇಂದ್ರ
ನವದೆಹಲಿ , ಬುಧವಾರ, 27 ಮೇ 2020 (08:39 IST)
ನವದೆಹಲಿ: ಕೊರೋನಾ ಹರಡಿದ ಚೀನಾ ಉತ್ಪನ್ನಗಳ ಬಗ್ಗೆ ಈಗ ಜಾಗತಿಕವಾಗಿ ಒಂದು ರೀತಿಯ ಬಹಿಷ್ಕಾರ ಮನೋಭಾವ ಕಂಡುಬರುತ್ತಿದೆ. ಇದೀಗ ಭಾರತ ಸರ್ಕಾರ ಚೀನಾ ಮೂಲದ ಝೂಮ್ ಆಪ್ ಗೆ ಬದಲಾಗಿ ಭಾರತದ್ದೇ ಆಪ್ ತಯಾರಿಸಲು ಪ್ರೋತ್ಸಾಹ ನೀಡಲು ಮುಂದಾಗಿದೆ.


ಲಾಕ್ ಡೌನ್ ಸಮಯದಲ್ಲಿ ಮನೆಯಿಂದಲೇ ಕಂಪನಿಗಳಿಗೆ ಮೀಟಿಂಗ್ ನಡೆಸಲು ಝೂಮ್ ಆಪ್ ಸಹಕಾರಿಯಾಗಿತ್ತು. ಆದರೆ ಇದು ಸುರಕ್ಷಿತವಲ್ಲ ಎಂದು ಕೇಂದ್ರ ಎಚ್ಚರಿಕೆ ನೀಡಿತ್ತು.

ಈ ಚೀನಾ ಮೂಲದ ಝೂಮ್ ಆಪ್ ಬದಲಿಗೆ ಈಗ ಭಾರತದ್ದೇ ಗ್ರೂಪ್ ವಿಡಿಯೋ ಚ್ಯಾಟಿಂಗ್ ಆಪ್ ತಯಾರಿಸಲು ಇಲ್ಲಿನ ಸಾಫ್ಟ್ ವೇರ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಆಹ್ವಾನ ನೀಡಿದೆ. ಅಷ್ಟೇ ಅಲ್ಲ, ಇಂತಹ ಆಪ್ ತಯಾರಿಸುವ ಕಂಪನಿಗೆ ಆರ್ಥಿಕ ನೆರವು ನೀಡುವುದಾಗಿಯೂ ಘೋಷಿಸಿದೆ. ಈ ನಿಟ್ಟಿನಲ್ಲಿ ಭಾರತದ ಪ್ರಮುಖ ಸಾಫ್ಟ್ ವೇರ್ ಕಂಪನಿಗಳು ಈಗ ಕಾರ್ಯೋನ್ಮುಖವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ವಿಫಲವಾದ ಹಿನ್ನಲೆ; ಪ್ರಧಾನಿ ಮೋದಿಗೆ ವ್ಯಂಗ್ಯ ಮಾಡಿದ ರಾಹುಲ್ ಗಾಂಧಿ