ಬೆಂಗಳೂರು: ಹಸಿರು, ಆರೆಂಜ್ ವಲಯಗಳಲ್ಲಿ ಸರ್ಕಾರ ಲಾಕ್ ಡೌನ್ ನಿಯಮಗಳನ್ನು ಕೊಂಚ ಮಟ್ಟಿಗೆ ಸಡಿಲಗೊಳಿಸಿದೆ. ಹೀಗಾಗಿ ಅಂಗಡಿ ತೆರೆಯಲು ಅವಕಾಶ ಸಿಕ್ಕಿದೆ.
ಆದರೆ ಅಂಗಡಿ ಬಾಗಿಲು ತೆರೆದರೂ ವ್ಯಾಪಾರ ಮೊದಲಿನಂತಿಲ್ಲದೇ ಮಾಲಿಕರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಅಗತ್ಯ ದಿನಸಿ ವಸ್ತುಗಳ ಅಂಗಡಿಗಳಿಗೆ ಜನ ಬರುತ್ತಿದ್ದಾರೆ.
ಆದರೆ ಉಳಿದ ವಸ್ತುಗಳ ಖರೀದಿಗೆ ಜನ ಮನೆಯಿಂದ ಹೊರಬರಲೂ ಹಿಂಜರಿಯುತ್ತಿದ್ದಾರೆ. ಹೀಗಾಗಿ ಸಾಕಷ್ಟು ವ್ಯಾಪಾರವಿಲ್ಲದೇ ವ್ಯಾಪಾರಿಗಳು ಪರದಾಡುವಂತಾಗಿದೆ. ಕೆಲವು ದಿನ ಕಳೆದ ಮೇಲಾದರೂ ಈ ಪರಿಸ್ಥಿತಿ ಸುಧಾರಿಸಬಹುದು. ಜನರಲ್ಲಿ ಆತಂಕ ಕಡಿಮೆಯಾದ ಬಳಿಕ ಗ್ರಾಹಕರು ಬರಬಹುದು ಎಂಬ ನಿರೀಕ್ಷೆ ವ್ಯಾಪಾರಿಗಳದ್ದು.