Publish Date: Sun, 26 Apr 2020 (09:05 IST)
Updated Date: Sun, 26 Apr 2020 (09:07 IST)
ಬೆಂಗಳೂರು: ಲಾಕ್ ಡೌನ್ 2 ನೇ ಹಂತ ಮುಗಿಯಲು ಇನ್ನು ಅಧಿಕೃತವಾಗಿ ಒಂದು ವಾರ ಬಾಕಿ ಉಳಿದಿದೆ. ಪ್ರಧಾನಿ ಮೋದಿ ಮೇ 3 ರವರೆಗೆ ದೇಶದಾದ್ಯಂತ ಲಾಕ್ ಡೌನ್ ಘೋಷಿಸಿದ್ದರು.
ಮನೆಯಲ್ಲೇ ಕೂತು ತೀರಾ ಹತಾಶೆಗೊಳಗಾಗಿರುವ ಜನ ಇನ್ನೊಂದು ವಾರ ಕಾದರೆ ಲಾಕ್ ಡೌನ್ ಮುಗಿಯಬಹುದೇನೋ ಎಂಬ ಭರವಸೆಯಲ್ಲಿದ್ದಾರೆ.
ಸದ್ಯದ ಪರಿಸ್ಥಿತಿ ನೋಡಿದರೆ ಇದ್ದಕ್ಕಿದ್ದಂತೆ ಸಂಪೂರ್ಣವಾಗಿ ಲಾಕ್ ಡೌನ್ ಮುಕ್ತ ಮಾಡುವ ಯೋಜನೆ ಸರ್ಕಾರ ಮಾಡದು. ಯಾಕೆಂದರೆ ಈಗಲೂ ಪ್ರತಿನಿತ್ಯ ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಹೀಗಾಗಿ ಭಾಗಶಃ ಲಾಕ್ ಡೌನ್ ತೆರೆಯುವ ಸಾಧ‍್ಯತೆಯೇ ಹೆಚ್ಚು. ಅದೂ ಅಲ್ಲದೆ, ಇನ್ನೂ ಲಾಕ್ ಡೌನ್ ಮುಂದುವರಿಸಿದರೂ ಅಚ್ಚರಿಯಿಲ್ಲ. ಏನೇ ಆದರೂ ಈಗಲೇ ಮಾನಸಿಕವಾಗಿ ಸಿದ್ಧವಾಗಿರುವುದು ಉತ್ತಮ.