Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೋನಾದಿಂದ ಸಂಕಷ್ಟಕ್ಕೀಡಾದವರ ಹಸಿವು ತಣಿಸಲಿರುವ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್

ಕೊರೋನಾದಿಂದ ಸಂಕಷ್ಟಕ್ಕೀಡಾದವರ ಹಸಿವು ತಣಿಸಲಿರುವ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್
ಮುಂಬೈ , ಶನಿವಾರ, 25 ಏಪ್ರಿಲ್ 2020 (10:00 IST)
ಮುಂಬೈ: ಕೊರೋನಾವೈರಸ್ ಹರಡುವಿಕೆ ತಡೆಯಲು ಲಾಕ್ ಡೌನ್ ಮಾಡಿದ ಹಿನ್ನೆಯಲ್ಲಿ ಎಷ್ಟೋ ಬಡವರಿಗೆ ಒಪ್ಪೊತ್ತಿನ ಊಟಕ್ಕೆ ಗತಿಯಿಲ್ಲದಂತಾಗಿದೆ. ಇಂತಹವರ ಹಸಿವು ನೀಗಿಸುವ ಕೆಲಸವನ್ನು ಆರ್ ಸಿಬಿ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಮಾಡಲಿದ್ದಾರೆ.


ಇನ್ ಸ್ಟಾಗ್ರಾಂ ಲೈವ್ ನಲ್ಲಿ ಜತೆಯಾಗಿ ಬಂದ ಎಬಿಡಿ ಮತ್ತು ಕೊಹ್ಲಿ ಬಡವರ ಹಸಿವು ತಣಿಸಲು 2016 ರ ಐಪಿಎಲ್ ನಲ್ಲಿ ತಾವು ಬಳಕೆ ಮಾಡಿದ್ದ ಬ್ಯಾಟ್, ಗ್ಲೌಸ್, ಶರ್ಟ್ ನ್ನು ಆನ್ ಲೈನ್ ನಲ್ಲಿ ಹರಾಜಿಗಿಟ್ಟು ಅದರಿಂದ ಬಂದ ಹಣವನ್ನು ಹಸಿವು ನೀಗಿಸುವ ಕೆಲಸಕ್ಕೆ ಬಳಸುವುದಾಗಿ ಇಬ್ಬರೂ ಆಟಗಾರರು ಘೋಷಿಸಿದ್ದಾರೆ.

ಈ ಪ್ರಸ್ತಾಪವನ್ನು ಮೊದಲು ತೆರೆದಿಟ್ಟವರು ಎಬಿಡಿ. 2016 ರಲ್ಲಿ ತಾವು ಶತಕ ಸಿಡಿಸಿದ ಬ್ಯಾಟ್, ಆ ಪಂದ್ಯದಲ್ಲಿ ಬಳಸಿದ ಗ್ಲೌಸ್ ಗಳನ್ನು ಹರಾಜು ಹಾಕೋಣ. ಕೊರೋನಾದಿಂದಾಗಿ ಹಸಿವಿನಿಂದಿರುವ ಕೂಗು ನನ್ನ ಮನಸ್ಸಿಗೆ ನೋವುಂಟು ಮಾಡುತ್ತಿದೆ ಎಂದು ಎಬಿಡಿ ಕೊಹ್ಲಿಯನ್ನು ಕೇಳಿಕೊಂಡಿದ್ದಾರೆ. ಇದಕ್ಕೆ ಕೊಹ್ಲಿ ಕೂಡಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನಡೆಯುತ್ತದೆ ಎಂಬ ಭರವಸೆಯಲ್ಲಿರುವ ವಿರಾಟ್ ಕೊಹ್ಲಿ