Publish Date: Mon, 20 Apr 2020 (10:35 IST)
Updated Date: Mon, 20 Apr 2020 (10:36 IST)
ಮುಂಬೈ: ಲಾಕ್ ಡೌನ್ ಇಫೆಕ್ಟ್ ಆಗಿರುವುದು ಕೇವಲ ಜನ ಸಾಮಾನ್ಯರಿಗೆ ಮಾತ್ರವಲ್ಲ. ಟೀಂ ಇಂಡಿಯಾ ಕ್ರಿಕೆಟಿಗರಿಗೂ ಇದರ ಪರಿಣಾಮ ತಟ್ಟಿದೆ.
ಟೀಂ ಇಂಡಿಯಾ ಕ್ರಿಕೆಟಿಗ ಶಹಬಾಜ್ ನದೀಂ ಲಾಕ್ ಡೌನ್ ನಿಂದಾಗಿ ಅನಾರೋಗ್ಯಕ್ಕೊಳಗಾದ ಪತ್ನಿಯನ್ನು ನೋಡಲು ಹೋಗಲಾಗದೇ ಪರದಾಡುತ್ತಿದ್ದಾರೆ.
ರಾಂಚಿಯಲ್ಲಿರುವ ಕ್ರಿಕೆಟಿಗ ನದೀಂ ಇದ್ದರೆ, ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿರುವ ಪತ್ನಿ ಕೋಲ್ಕೊತ್ತಾದಲ್ಲಿದ್ದಾರೆ. ಇದೀಗ ಪತ್ನಿಗೆ ಚಿಕಿತ್ಸೆ ಕೊಡಿಸಲೂ ಕೋಲ್ಕೊತ್ತಾಗೆ ತೆರಳಲು ಸಾಧ‍್ಯವಾಗದೇ ಪಶ್ಚಿಮ ಬಂಗಾಲ ಸರ್ಕಾರದ ಒಪ್ಪಿಗೆಗಾಗಿ ಕಾದು ಕುಳಿತಿದ್ದಾರೆ.