ಬೆಂಗಳೂರು: ರಾಜ್ಯದಾದ್ಯಂತ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಮಳೆಯಾಗಿದೆ. ಈ ಹವಾಮಾನ ಕೊರೋನಾ ಆತಂಕ ಹೆಚ್ಚಿಸಲಿದೆಯೇ?
ಶೀತ ಹವಾಗುಣದಲ್ಲಿ ಕೊರೋನಾ ವೈರಾಣು ಬೇಗನೇ ಹಬ್ಬುತ್ತದೆ. ಉಷ್ಣತೆ ಹೆಚ್ಚಾದಂತೆ ಸೋಂಕಿನ ಶಕ್ತಿ ಕುಗ್ಗುತ್ತದೆ ಎಂದು ತಜ್ಞರೇ ಹೇಳುತ್ತಾರೆ.
ಹೀಗಾಗಿ ಮಳೆ ಬಂದರೆ ಕೊರೋನಾ ಪ್ರಕರಣಗಳೂ ಹೆಚ್ಚಬಹುದೇ ಎಂಬ ಆತಂಕ ಜನರಲ್ಲಿದೆ. ಇದಕ್ಕೆ ತಕ್ಕಂತೆ ಜುಲೈ, ಆಗಸ್ಟ್ ನಲ್ಲಿ ಮಳೆ ಹೆಚ್ಚಾದಂತೆ ಕೊರೋನಾ ಸೋಂಕು ಕೂಡಾ ಹೆಚ್ಚಬಹುದು. ಭಾರತ ಎರಡನೇ ಬಾರಿಗೆ ಈ ಸಮಯದಲ್ಲಿ ಕೊರೋನಾದಿಂದ ಸಂಕಷ್ಟಕ್ಕೀಡಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.