Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊರೋನಾ ಇಫೆಕ್ಟ್: ಭಾರತದಲ್ಲಿ ವರ್ಕ್ ಫ್ರಂ ಹೋಂ ಇನ್ನಷ್ಟು ಜನಪ್ರಿಯ

ಕೊರೋನಾ ಇಫೆಕ್ಟ್: ಭಾರತದಲ್ಲಿ ವರ್ಕ್ ಫ್ರಂ ಹೋಂ ಇನ್ನಷ್ಟು ಜನಪ್ರಿಯ
ಬೆಂಗಳೂರು , ಶುಕ್ರವಾರ, 8 ಮೇ 2020 (09:05 IST)
ಬೆಂಗಳೂರು: ಕೊರೋನಾ ಎಂಬ ಮಹಾಮಾರಿ ಮಾಡಿದ ಒಂದೇ ಒಂದು ಉಪಕಾರವೆಂದರೆ ಬಹುಶಃ ಇದುವೇ ಇರಬೇಕು. ಅದು ಭಾರತದಲ್ಲಿ ವರ್ಕ್ ಫ್ರಂ ಹೋಂ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿರುವುದು.


ಈ ಮೊದಲು ಕೇವಲ ಐಟಿ-ಬಿಟಿ ಕಂಪನಿಗಳು ಮಾತ್ರ ಅಗತ್ಯವಿದ್ದಾಗ ಮಾತ್ರ ತಮ್ಮ ನೌಕರರಿಗೆ ಇಂತಹ ಸೌಲಭ್ಯ ಕೊಡುತ್ತಿತ್ತು. ಆದರೆ ಕೊರೋನಾ ಬಂದ ಮೇಲೆ ಹೆಚ್ಚಿನ ಕಂಪನಿಗಳು ವರ್ಕ್ ಫ್ರಂ ಹೋಂ ಪರಿಕಲ್ಪನೆಯನ್ನು ನೆಚ್ಚಿಕೊಂಡಿದೆ.

ಮನೆಯಿಂದಲೇ ಮೀಟಿಂಗ್ ಅಟೆಂಡ್ ಮಾಡುವುದು, ಕ್ಲೈಂಟ್ ಗಳ ಜತೆ ವ್ಯವಹರಿಸುವುದು ಎಲ್ಲವೂ ನಡೆಯುತ್ತಿದೆ. ಈ ಟ್ರೆಂಡ್ ಮುಂದೆ ಸಾಮಾನ್ಯವಾಗಲಿದೆ. ಕೊರೋನಾ ಬಳಿಕವೂ ಕೆಲವು ಕಂಪನಿಗಳು ತಮ್ಮ ನೌಕರರಿಗೆ ವರ್ಕ್ ಫ್ರಂ ಹೋಂ ಆಯ್ಕೆ ನೀಡುವ ಸಾಧ‍್ಯತೆಯಿದೆ.

ಇದು ಒಂದು ರೀತಿಯಲ್ಲಿ ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡುವಲ್ಲೂ ಸಹಾಯ ಮಾಡಬಲ್ಲವು. ಕೊರೋನಾದಿಂದ ಬೇರೆಲ್ಲಾ ಅನಾಹುತವಾದರೂ ಇದೊಂದು ರೀತಿಯಲ್ಲಿ ಲಾಭವೇ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಲ್ಲಿ ಶೀತ, ಕೆಮ್ಮು ಶೀಘ್ರವೇ ಗುಣವಾಗಬೇಕೆಂದರೆ ಈ ಮನೆಮದ್ದನ್ನು ಸೇವಿಸಿ