ಬೆಂಗಳೂರು: ಟೆಲಿವಿಷನ್ ಅಸೋಸಿಯೇಷನ್ ಮನವಿ ಮೇರೆಗೆ ರಾಜ್ಯ ಸರ್ಕಾರ ಧಾರವಾಹಿಗಳ ಇನ್ ಡೋರ್ ಶೂಟಿಂಗ್ ಗೆ ಅನುಮತಿಯೇನೋ ಕೊಟ್ಟಿದೆ. ಆದರೆ ತಕ್ಷಣಕ್ಕೇ ಧಾರವಾಹಿಗಳ ತಂಡಗಳು ಶೂಟಿಂಗ್ ಆರಂಭವಾಗಲ್ಲ.
ಕೊರೋನಾ ಭಾರತದಲ್ಲಿ ಹರಡುತ್ತಿರುವ ಆರಂಭದ ದಿನಗಳಲ್ಲಿ ಶೂಟಿಂಗ್ ಸೆಟ್ ನಲ್ಲಿ ವೈದ್ಯರನ್ನು ಕರೆಸಿ ಸ್ಕ್ರೀನಿಂಗ್ ಮಾಡಿ ಶೂಟಿಂಗ್ ನಡೆಸಿದ ಉದಾಹರಣೆಗಳಿವೆ. ಆದರೆ ಈಗ ಕೊರೋನಾ ವ್ಯಾಪಕವಾಗಿದೆ. ಇಂತಹ ಸಂದರ್ಭದಲ್ಲಿ ಶೂಟಿಂಗ್ ನಡೆಸುವುದು ಅಪಾಯವೇ.
ಅನುಮತಿ ಸಿಕ್ಕರೂ ಸರ್ಕಾರ ಕೆಲವೊಂದು ಷರತ್ತು ವಿಧಿಸಿದೆ. ಆ ಪ್ರಕಾರ ಸೀಮಿತ ಜನರನ್ನು ಇಟ್ಟುಕೊಂಡು ಶೂಟಿಂಗ್ ನಡೆಸಬೇಕಿದೆ. ಒಂದು ಧಾರವಾಹಿ ಎಂದರೆ ಕನಿಷ್ಠ 40 ರಿಂದ 50 ಜನರ ಅಗತ್ಯವಿದೆ. ಸೀಮಿತ ಜನರನ್ನು ಇಟ್ಟುಕೊಂಡು ಶೂಟಿಂಗ್ ನಡೆಸುವುದು ಅಷ್ಟು ಸುಲಭವಲ್ಲ.
ಹೀಗಾಗಿ ಕೆಲವು ಧಾರವಾಹಿ ತಂಡಗಳು ಈಗಾಗಲೇ ಮೇ 16 ರ ನಂತರವೇ ಶೂಟಿಂಗ್ ನಡೆಸುವ ಯೋಜನೆ ಹಾಕಿಕೊಂಡಿದೆ. ಟೆಲಿವಿಷನ್ ಅಸೋಸಿಯೇಷನ್ ಮೇ 25 ಬಳಿಕವೇ ಶೂಟಿಂಗ್ ಆರಂಬಿಸುವ ಸೂಚನೆ ನೀಡಿದೆ. ಹೀಗಾಗಿ ಶೂಟಿಂಗ್ ಗೆ ಅನುಮತಿ ಸಿಕ್ಕಿತೆಂದು ನಾಳೆಯೇ ಯಾವ ಧಾರವಾಹಿ ತಂಡಗಳೂ ಶೂಟಿಂಗ್ ಪ್ರಾರಂಭಿಸುತ್ತಿಲ್ಲ.