Publish Date: Sun, 02 Aug 2020 (11:11 IST)
Updated Date: Sun, 02 Aug 2020 (11:12 IST)
ನವದೆಹಲಿ: ವಿಶ್ವವನ್ನೇ ನಡುಗಿಸುತ್ತಿರುವ ಕೊರೋನಾ ಮಹಾಮಾರಿಯ ಪರಿಣಾಮ ಸದ್ಯಕ್ಕೆಲ್ಲಾ ಕೊನೆಯಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಕೊರೋನಾದಿಂದಾಗಿ ಇಡೀ ವಿಶ್ವವೇ ಆರೋಗ್ಯದ ಜತೆಗೆ ಆರ್ಥಿಕ ಸಂಕಷ್ಟದಲ್ಲಿದೆ. ಈ ರೋಗ ವಾಸಿಯಾದರೂ ಇದರ ಪರಿಣಾಮ ತೀರಲು ದಶಕಗಳೇ ಬೇಕಾದೀತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೊರೋನಾ ವಾಸಿಯಾದರೂ ಅದರ ಪರಿಣಾಮ ದೇಹದ ಮೇಲೆ ಆಗುತ್ತದೆ. ಇದರ ಪರಿಣಾಮ ಹಲವು ದಶಕಗಳವರೆಗೆ ಉಳಿಯಲಿದೆ. ಇದರ ಪರಿಣಾಮ ಹಲವಾರು ಜನರಲ್ಲಿ ಹಲವು ಸಮಯದವರೆಗೂ ಆರೋಗ್ಯ ಸಮಸ್ಯೆಗಳು ಕಂಡುಬರಲಿವೆ ಎಂದು ಅದು ಹೇಳಿದೆ.