Publish Date: Sat, 01 Aug 2020 (22:17 IST)
Updated Date: Sat, 01 Aug 2020 (22:19 IST)
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಕೊರೊನಾ ವೈರಸ್ ಭೀತಿ ಎದುರಾಗಿದೆ.
ಯಾವುದೇ ಲಕ್ಷಣಗಳು ಇರದಿದ್ದರೂ ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಐವಾನ್ ಡಿಸೋಜ್ ಅವರಿಗೆ ಕೊರೊನಾ ದೃಢಪಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದ ಡಿ.ಕೆ.ಶಿವಕುಮಾರ್ ಅವರ ಜೊತೆಗೆ ಐವಾನ್ ಡಿಸೋಜ್ ಇದ್ದರು.
ಐವಾನ್ ಅವರ ಪತ್ನಿಗೂ ಕೊರೊನಾ ಪಕ್ಕಾ ಆಗಿದೆ. ಹೀಗಂತ ಐವಾನ್ ಅವರೇ ಪೋಸ್ಟ್ ಮಾಡಿದ್ದಾರೆ.