Publish Date: Wed, 10 Jun 2020 (10:09 IST)
Updated Date: Wed, 10 Jun 2020 (10:14 IST)
ನವದೆಹಲಿ: ಕೊರೋನಾ ಪೀಡಿತರಾಗಿರುವ ಬಿಜೆಪಿ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ಅವರ ತಾಯಿಗೆ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಜ್ಯೋತಿರಾಧಿತ್ಯ ಮತ್ತು ಅವರ ತಾಯಿ ಮಾಧವಿಗೆ ನಿನ್ನೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಕಳೆದ ನಾಲ್ಕು ದಿನಗಳ ಹಿಂದೆಯೇ ಜ್ವರದಿಂದ ಬಳಲುತ್ತಿರುವ ಕಾರಣಕ್ಕೆ ಇವರನ್ನು ದೆಹಲಿಯ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಿಶೇಷವೆಂದರೆ ಜೂನ್ 19 ರಂದು ನಡೆಯಲಿರುವ ರಾಜ್ಯ ಸಭಾ ಚುನಾವಣಾ ಕದನದಲ್ಲಿ ಜ್ಯೋತಿರಾಧಿತ್ಯ ಕೂಡಾ ಸ್ಪರ್ಧೆಯಲ್ಲಿದ್ದಾರೆ. ಇದರ ನಡುವೆಯೇ ಈ ಬೆಳವಣಿಗೆ ಆತಂಕ ತಂದಿದೆ.