Publish Date: Mon, 08 Jun 2020 (09:01 IST)
Updated Date: Mon, 08 Jun 2020 (09:02 IST)
ಬೆಂಗಳೂರು: ಕೇಂದ್ರ ಸರ್ಕಾರ ಹೊರಡಿಸಿದ ಅನ್ ಲಾಕ್ 1 ಆದೇಶದ ಅನ್ವಯ ಇಂದಿನಿಂದ ಮತ್ತಷ್ಟು ಸೇವೆಗಳಿಗೆ ವಿನಾಯಿತಿ ಸಿಗಲಿದೆ.
ಮುಖ್ಯವಾಗಿ ಹೋಟೆಲ್, ಮಾಲ್ ಗಳು, ದೇವಾಲಯಗಳನ್ನು ತೆರೆಯಲು ಇಂದಿನಿಂದ ಅನುಮತಿ ಸಿಕ್ಕಿದ್ದು, ಮತ್ತಷ್ಟು ಆರ್ಥಿಕ ಚಟುವಟಿಕೆಗಳ ಪುನರಾರಂಭವಾದಂತಾಗುತ್ತದೆ.
ಆದರೆ ಎಲ್ಲೇ ಹೋಗುವುದಿದ್ದರೂ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿರಲಿದೆ. ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಈಗಾಗಲೇ ಮಾಲ್, ಹೋಟೆಲ್, ದೇವಾಲಯಗಳು ಕೈಗೊಂಡಿವೆ. ಅದನ್ನು ಪಾಲನೆ ಮಾಡಿ ಕೊರೋನಾ ಭೀತಿ ಹೆಚ್ಚಾಗದಂತೆ ತಡೆಯುವುದು ಜನರ ಕೈಲಿದೆ.