ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯಾಗಲಿರುವ ವರ ನಿಕ್ ಜೊನಾಸ್ ಗೆ ಟೈಪ್ 1 ಮಧುಮೇಹ ಖಾಯಿಲೆ ಇದೆಯಂತೆ.
ಹಾಗಂತ ಅವರೇ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಬರೆದುಕೊಂಡಿದ್ದಾರೆ. ತನಗೆ 13 ವರ್ಷಗಳಿಂದ ಮಧುಮೇಹವಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಅಷ್ಟೇ ಅಲ್ಲ, ಮಧುಮೇಹಿಗಳಿಗೆ ಸ್ಪೂರ್ತಿದಾಯಕ ಸಂದೇಶ ಬರೆದಿರುವ ಅವರು ತಾನು ಹೇಗೆ ಈ ಖಾಯಿಲೆಯಿಂದ ರಕ್ಷಿಸಿಕೊಳ‍್ಳಲು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.