ಬೆಂಗಳೂರು: ಯಾವುದೂ ಅತಿಯಾದರೆ ವಿಷವೇ. ಹಾಗೆಯೇ ಮಧುಮೇಹವೂ ನಿಯಂತ್ರಣದಲ್ಲಿದ್ದರೆ ಸಮಸ್ಯೆಯಾಗದು. ಆದರೆ ಅದೂ ಅತಿಯಾದರೆ ಇನ್ನು ಹಲವು ಮಾರಕ ಸಮಸ್ಯೆಗಳಿಗೆ ದಾರಿ ಮಾಡಬಹುದು.
ಟೈಪ್ 2 ಮಧುಮೇಹಿಗಳು ರಕ್ತದೊತ್ತಡ ಮತ್ತು ಕೊಲೆಸ್ಟರಾಲ್ ಅಂಶ ಕಡಿಮೆ ಮಾಡುವ ಔಷಧಗಳನ್ನು ಸುದೀರ್ಘ ಕಾಲ ತೆಗೆದುಕೊಳ್ಳುತ್ತಿದ್ದರೆ ಅದು ಕಿಡ್ನಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ನೂತನ ಅಧ್ಯಯನವೊಂದು ಹೇಳಿದೆ.
ಸಾಮಾನ್ಯವಾಗಿ ಮಧುಮೇಹದ ಪ್ರಮಾಣ ಹೆಚ್ಚಾದರೆ ಕಿಡ್ನಿಗೆ ತೊಂದರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರ ಜತೆಗೆ ಇಂತಹ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ರಕ್ತದೊತ್ತಡ ಮತ್ತು ಕೊಲೆಸ್ಟರಾಲ್ ಕಡಿಮೆ ಮಾಡುವ ಔಷಧಗಳನ್ನು ಸೇವಿಸುತ್ತಿದ್ದರೂ ಎಚ್ಚರಿಕೆಯಿಂದಿರುವುದು ಅಗತ್ಯ ಎಂದು ಆರೋಗ್ಯ ಸಂಸ್ಥೆಯೊಂದು ಎಚ್ಚರಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.