Publish Date: Wed, 14 Nov 2018 (14:10 IST)
Updated Date: Wed, 14 Nov 2018 (14:12 IST)
ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಸೈಕಲ್ ಜಾಥಾ ಮುಖೇನ ಜಾಗೃತಿ ಮೂಡಿಸಲಾಯಿತು.
ವಿಶ್ವಮಧುಮೇಹ ದಿನಾಚರಣೆ ಅಂಗವಾಗಿ ಬಳ್ಳಾರಿ ನಗರದಲ್ಲಿ ಬೆಳ್ಳಂಬೆಳಿಗ್ಗೆ ಸೈಕಲ್ ಜಾಥಾದ ಮುಖೇನ
ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ.ರಾಜೇಂದ್ರ ಸೈಕ್ಲಿಂಗ್ ಮಾಡಿ ಜಾಥಾಕ್ಕೆ ಚಾಲನೆ ನೀಡಿದರು.
ದೇಗುಲದ ಆವರಣದಿಂದ ಕೆಳ ಸೇತುವೆ, ಗಡಿಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೆ ಬ್ರೂಸ್ಬೇಟೆ ಠಾಣೆ, ತೇರುಬೀದಿ, ಜೈನ್ ಮಾರುಕಟ್ಟೆ, ಮೋತಿ (ಬಸವೇಶ್ವರ) ವೃತ್ತ, ಮ್ಯಾದಾರ ಓಣಿಯ ರಸ್ತೆ, ಎಸ್ಪಿ ವೃತ್ತ, ಪಾರ್ವತಿ ನಗರ ಮುಖ್ಯರಸ್ತೆ ಮಾರ್ಗವಾಗಿ ಕನಕದುರ್ಗಮ್ಮ ದೇಗುಲದವರೆಗೆ ಸೈಕಲ್ ಜಾಥಾ ನಡೆಸಿದರು. ಬಳ್ಳಾರಿ ಸೈಕ್ಲಿಂಗ್ ಅಸೋಸಿಯೇಷನ್ ಮುಖ್ಯಸ್ಥ ಡಾ.ಬಿ.ಕೆ.ಸುಂದರ್ ಸೇರಿದಂತೆ ನೂರಾರು ಮಂದಿ ಈ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದರು.