Publish Date: Tue, 25 Dec 2018 (08:58 IST)
Updated Date: Tue, 25 Dec 2018 (08:59 IST)
ಬೆಂಗಳೂರು: ನಾವು ಸ್ನಾನ ಮಾಡುವ ನೀರು ಗಂಗೆ, ಗೋದಾವರಿ, ಕಾವೇರಿಯಷ್ಟೇ ಪವಿತ್ರ. ಈ ಪವಿತ್ರ ನದಿಗಳನ್ನು ಪ್ರಾರ್ಥಿಸಿಕೊಂಡು ಸ್ನಾನ ಮಾಡುವುದರಿಂದ ಭವರೋಗಾದಿಗಳು ನಿವಾರಣೆಯಾಗುತ್ತವೆ.
ಸ್ನಾನ ಮಾಡುವಾಗ ‘ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು’ ಎಂದು ಪ್ರಾರ್ಥಿಸಬೇಕು.
ಸ್ನಾನ ಎನ್ನುವುದು ಕೇವಲ ದೈಹಿಕ ಶುದ್ಧಿ ಅಷ್ಟೇ ಅಲ್ಲ. ಮನಸ್ಸಿನ ಕೊಳೆಯನ್ನೂ ನಾಶ ಮಾಡಿ ನಮ್ಮಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸುತ್ತದೆ.ಈ ಪವಿತ್ರ ನದಿಗಳನ್ನು ಪ್ರಾರ್ಥಿಸಿ ಅವುಗಳ ಅಂಶವನ್ನೇ ಆಹ್ವಾನಿಸಕೊಂಡು ಸ್ನಾನ ಮಾಡುವುದರಿಂದ ಸಕಲ ಪಾಪಗಳೂ ತೊಳೆದುಹೋಗುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ