Publish Date: Mon, 24 Dec 2018 (08:56 IST)
Updated Date: Mon, 24 Dec 2018 (08:58 IST)
ಬೆಂಗಳೂರು: ದೇವರ ಮನೆಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ಅಥವಾ ಸಂಜೆ ದೇವರಿಗೆ ದೀಪ ಹಚ್ಚಿಟ್ಟು ಪ್ರಾರ್ಥನೆ ಸಲ್ಲಿಸುತ್ತೇವೆ. ಆದರೆ ಹೀಗೆ ಮಾಡುವುದರ ಮೊದಲು ಕೆಲವು ವಿಚಾರಗಳು ತಿಳಿದಿರಬೇಕು.
ದೇವರಿಗೆ ದೀಪ ಹಚ್ಚುವಾಗ ದೀಪ ಶುದ್ಧವಾಗಿರಬೇಕು, ಕೊಳೆಯಾಗಿರಬಾರದು. ಅದು ಸೂರ್ಯನಿಗೆ ಮುಖ ಮಾಡಿರಬೇಕು. ದೀಪದಲ್ಲಿ ಎಣ್ಣೆ ಅಥವಾ ತುಪ್ಪ ಬಳಸುತ್ತಿದ್ದರೆ ಅದು ತುಂಬಿದೆಯೇ ಎಂದು ನೋಡಿಕೊಳ್ಳಬೇಕು. ದೀಪ ಹಚ್ಚಿದ ಮೇಲೆ ಎಣ್ಣೆ ಅಥವಾ ತುಪ್ಪ ಇಲ್ಲದೇ ಅದು ಆರಿದರೆ ಶುಭವಲ್ಲ.
ದೀಪ ಆರಿಸುವಾಗ ಬಾಯಿಯಲ್ಲಿ ಗಾಳಿ ಹಾಕಿ ಆರಿಸಬಾರದು. ಅದರಿಂ ಅಶುದ್ಧಿಯಾಗುತ್ತದೆ. ಹೀಗಾಗಿ ಕೈಯಲ್ಲಿ ಗಾಳಿ ಹಾಕಿ ದಿಪ ಆರಿಸುವುದು ಸರಿಯಾದ ಕ್ರಮ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ