Home Remedies: ತುಟಿಗಳು ಕಪ್ಪಾಗುವುದು ಹೈಪರ್ ಪಿಗ್ಮೆಂಟೇಶನ್ ಪರಿಣಾಮದಿಂದ. ಇದು ಮೆಲನಿನ್ ಹೆಚ್ಚಾಗುವುದರಿಂದ ಉಂಟಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಕೆಲವು ಜನರು ವೈದ್ಯಕೀಯ ಮತ್ತು ಜೀವನಶೈಲಿಯ ಕಾರಣಗಳಿಂದ ಕಪ್ಪಾದ ತುಟಿಗಳನ್ನು ಹೊಂದಿರುತ್ತಾರೆ. ತುಟಿಗಳು ಕಪ್ಪಾಗಲು ಹಲವು ಕಾರಣಗಳಿವೆ. ಹಾಗೆಯೇ ಹಲವು ಮನೆಮದ್ದುಗಳಿವೆ. ತುಟಿಗಳ ಆರೈಕೆ ನಮಗೆ ಬಹಳ ಮುಖ್ಯ. ನಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ನಮಗೆ ಉತ್ತಮ ಫಲಿತಾಂಶ ಸಿಗುತ್ತದೆ. ಕಪ್ಪು ತುಟಿಗಳು ನಮ್ಮ ಅಂದವನ್ನು ಹಾಳು ಮಾಡುತ್ತದೆ.
ತುಟಿಗಳು ಕಪ್ಪಾಗುವುದು ಹೈಪರ್ ಪಿಗ್ಮೆಂಟೇಶನ್ ಪರಿಣಾಮದಿಂದ. ಇದು ಮೆಲನಿನ್ ಹೆಚ್ಚಾಗುವುದರಿಂದ ಉಂಟಾಗುತ್ತದೆ.
ಕಪ್ಪು ತುಟಿಗಳಿಂದ ಮುಕ್ತಿ ಪಡೆಯಲು ಇಲ್ಲಿದೆ ಮನೆಮದ್ದು
ನಿಂಬೆ ರಸ
2002 ರ ಅಧ್ಯಯನದ ಪ್ರಕಾರ ಸಿಟ್ರಸ್ ಹಣ್ಣಿನ ಸಿಪ್ಪೆಯು ಮೆಲನಿನ್ ಪ್ರತಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತದೆ. ಪ್ರತಿ ರಾತ್ರಿ ಮಲಗುವ ಮುನ್ನ ನಿಂಬೆಹಣ್ಣನ್ನು ಕತ್ತರಿಸಿ ಹೆಚ್ಚು ರಸವಿರುವ ಭಾಗವನ್ನು ನಿಮ್ಮ ತುಟಿಗಳ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಿ. ಮರುದಿನ ಬೆಳಿಗ್ಗೆ, ನಿಮ್ಮ ತುಟಿಗಳನ್ನು ನೀರಿನಿಂದ ತೊಳೆಯಿರಿ. ಸುಮಾರು 30 ದಿನಗಳವರೆಗೆ ಹೀಗೆ ಮಾಡಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ.
ಮಲಗುವ ಮೊದಲು, ನಿಂಬೆ ತುಂಡು ಕತ್ತರಿಸಿ ಸಕ್ಕರೆಯಲ್ಲಿ ಅದ್ದಿ. ಸಕ್ಕರೆ ಇರುವ ನಿಂಬೆಯಿಂದ ನಿಮ್ಮ ತುಟಿಗಳನ್ನು ಉಜ್ಜಿಕೊಳ್ಳಿ. ಮರುದಿನ ಬೆಳಿಗ್ಗೆ, ನಿಮ್ಮ ತುಟಿಗಳನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.ಇದನ್ನು ಸಹ ನಿಯಮಿತವಾಗಿ ಮಾಡುವುದರಿಂದ ಒಳ್ಳೆಯ ಪ್ರಯೋಜನವಾಗುತ್ತದೆ.
ಅರಿಶಿನ
2010 ರಲ್ಲಿ ನಡೆದ ಅಧ್ಯಯನದಲ್ಲಿ ಅರಿಶಿನವು ಮೆಲನಿನ್ ಪ್ರತಿರೋಧಕ ಎಂಬುದು ಸಾಬೀತಾಗಿದೆ. ಸಣ್ಣ ಬಟ್ಟಲನ್ನು ತೆಗೆದುಕೊಂಡು 1 ಚಮಚ ಹಾಲು ಹಾಗೂ ಅರ್ಧ ಚಮಚ ಅರಿಶಿನ ಪುಡಿ ತೆಗೆದುಕೊಂಡು ಮಿಶ್ರಣ ಮಾಡಿ. ನಂತರ ಒದ್ದೆಯಾದ ಬೆರಳಿನಿಂದ, ಪೇಸ್ಟ್ ಅನ್ನು ನಿಮ್ಮ ತುಟಿಗಳ ಮೇಲೆ ಉಜ್ಜಿಕೊಳ್ಳಿ. ಅದನ್ನು ಸುಮಾರು ಐದು ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ತಣ್ಣೀರಿನಿಂದ ನಿಧಾನವಾಗಿ ತೊಳೆಯಿರಿ. ನಿಮ್ಮ ತುಟಿಗಳನ್ನು ಒಣಗಿಸಿದ ನಂತರ, ನಿಮ್ಮ ನೆಚ್ಚಿನ ಮಾಯಿಶ್ಚರೈಸರ್ ಅನ್ನು ಅನ್ವಯಿಸವುದು ಹೆಚ್ಚಿನ ಪರಿಣಾಮ ನೀಡುತ್ತದೆ.
ಅಲೋವೆರಾ
ಅಲೋವೆರಾ ಚರ್ಮದ ಆರೋಗ್ಯಕ್ಕೆ ಬಹಳ ಉತ್ತಮವಾದ ವಸ್ತು ಎಂಬುದು ಹಲವಾರು ಅಧ್ಯಯನಗಳು ಸಾಬೀತು ಮಾಡಿದೆ. ಅಲೋವೆರಾದಲ್ಲಿನ ಸಂಯುಕ್ತವು ಮೆಲನಿನ್ ಉತ್ಪಾದನೆಯನ್ನು ತಡೆಯುತ್ತದೆ. ಪ್ರತಿ ದಿನ ಒಮ್ಮೆ, ತಾಜಾ ಅಲೋವೆರಾವನ್ನು ನಿಮ್ಮ ತುಟಿಗಳಿಗೆ ಹಚ್ಚಿ. ಅದು ಒಣಗಿದ ನಂತರ, ಅದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ಸುಮಾರು 30 ದಿನಗಳ ಕಾಲ ಬಳಕೆ ಮಾಡುವುದು ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ.
ದಾಳಿಂಬೆ
2005 ರಲ್ಲಿ ನಡೆದ ಅಧ್ಯಯನವೊಂದು ದಾಳಿಂಬೆ ಹಣ್ಣಿನ ಅಂಶವು ಚರ್ಮದ ಹೈಪರ್ಪಿಗ್ಮೆಂಟೇಶನ್ ಅನ್ನು ಹಗುರಗೊಳಿಸುತ್ತದೆ ಎಂಬುದನ್ನ ಸಾಬೀತು ಮಾಡಿದೆ. 1 ಚಮಚ ದಾಳಿಂಬೆ ಬೀಜ ಹಾಗೂ 1 ಟೀಚಮಚ ರೋಸ್ ವಾಟರ್ ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿಕೊಳ್ಳಿ. ನಂತರ ಆ ಪೇಸ್ಟ್ ಅನ್ನು ತುಟಿಗಳಿಗೆ ಹಚ್ಚಿ ಸುಮಾರು ಮೂರು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ, ನಂತರ ತಂಪಾದ ನೀರಿನಿಂದ ತೊಳೆಯಿರಿ. ಇದನ್ನು ಪ್ರತಿದಿನ ಬಳಕೆ ಮಾಡುವುದು ಉತ್ತಮ ಪರಿಣಾಮ ನೀಡುತ್ತದೆ.
ತೆಂಗಿನ ಎಣ್ಣೆ: ಸ್ವಲ್ಪ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಬೆರಳಿನ ಮೂಲಕ ಅದನ್ನು ತುಟಿಗೆ ಹಚ್ಚಿ ಮಸಾಜ್ ಮಾಡಿ. ಇದನ್ನು ಹಗಲಿನ ಸಮಯದಲ್ಲಿ ಸಹ ಮಾಡಬಹುದು ಅಥವಾ ರಾತ್ರಿ ಸಮಯದಲ್ಲಿ ಸಹ ಬಳಕೆ ಮಾಡಬಹುದು.
ರೋಸ್ ವಾಟರ್: ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡು ಅದಕ್ಕೆ ರೊಸ್ ವಾಟರ್ ಸೇರಿಸಿ ಮಿಶ್ರಣ ಮಾಡಿ. ಇದನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರು ನಿಮ್ಮ ತುಟಿಗಳಿಗೆ ಹಚ್ಚಿ. ನಿಮಗೆ ಕೆಲಸದ ಕಾರಣ ಬಿಡುವು ಸಿಗುವುದಿಲ್ಲ ಎಂದರೆ ರಾತ್ರಿ ಮಲಗುವ ಮುನ್ನ ಇದನ್ನು ಹಚ್ಚಿ.
ಆಲಿವ್ ಎಣ್ಣೆ: ಮಲಗುವ ಮುನ್ನ, ನಿಮ್ಮ ತುಟಿಗಳಿಗೆ ಆಲಿವ್ ಎಣ್ಣೆಯನ್ನು ಮಸಾಜ್ ಮಾಡಿ. ಇದು ನಿಮ್ಮ ತುಟಿಗಳ ಕಪ್ಪು ಬಣ್ಣವನ್ನು ಹೋಗಲಾಡಿಸುತ್ತದೆ.