ಅಂದವಾದ ಕೇಶರಾಶಿಯ ನಡುವೆ ತಲೆಹೊಟ್ಟು ಕೂದಲಿನ ಸೌಂದರ್ಯವನ್ನು ಹಾಳು ಮಾಡುವುದಲ್ಲದೇ ಕಿರಿಕಿರಿಯನ್ನು ಉಂಟು ಮಾಡುತ್ತದೆ. ತಲೆಕೆರೆತ ಅಥವಾ ಕೂದಲು ಶುಷ್ಕವಾಗುವುದು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಡ್ಯಾಂಡ್ರಫ್ ಮೂಲ ಕಾರಣ.
ಇದನ್ನು ಸರಿಯಾದ ಸಮಯಕ್ಕೆ ನಿವಾರಿಸಿಕೊಳ್ಳದಿದ್ರೆ ದೀರ್ಘಾವಧಿಯವರೆಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹಾಗಾದ್ರೆ ತಲೆ ಹೊಟ್ಟು ನಿವಾರಣೆಗೆ ಯಾವೆಲ್ಲಾ ಚಿಕಿತ್ಸೆಗಳಿವೆ ಎನ್ನುವುದನ್ನು ಚರ್ಮರೋಗ ತಜ್ಙರಾದ ಡಾ. ಜೈಶ್ರೀ ಶರದ್ ಅವರು ಒಂದಷ್ಟು ಒಳ ನೋಟವನ್ನು ತೆರೆದಿಟ್ಟಿದ್ದಾರೆ. ತಲೆಹೊಟ್ಟಿಗೆ ಕಾರಣಗಳು ಮತ್ತು ಇದಕ್ಕಿರುವ ಚಿಕಿತ್ಸೆಗಳ ಬಗ್ಗೆ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ತಲೆಹೊಟ್ಟಿಗೆ ಕಾರಣ ಮತ್ತು ಪರಿಹಾರಗಳು
ತಲೆಹೊಟ್ಟಿಗೆ ವಾತಾವರಣದ ಬದಲಾವಣೆ, ವಿಪರೀತ ಬೆವರುವುದು ಮತ್ತು ದೇಹದಲ್ಲಿನ ಹಾರ್ಮೋನ್ ಅಸಮತೋಲನ ಪ್ರಮುಖ ಕಾರಣ. ಇಷ್ಟೇ ಅಲ್ಲದೇ ಮಲಸೇಝಿಯಾ ಫರ್ ಫರ್ ಎನ್ನುವ ಶಿಲೀಂದ್ರದ ಸೋಂಕು ಕೂಡ ತಲೆಹೊಟ್ಟನ್ನು ತರಬಹುದು ಎನ್ನುತ್ತಾರೆ. ಇನ್ನೂ ಕೆಲವೊಮ್ಮೆ ನೀವು ಕೂದಲಿನ ಬುಡದ ಸ್ವಚ್ಚತೆ ಬಗ್ಗೆ ಗಮನ ಹರಿಸದಿದ್ದರೇ ಆಗಲೂ ತಲೆಹೊಟ್ಟು ಸಮಸ್ಯೆ ತಲೆದೂರಬಹುದು.
ಊರಿಯೂತ ಸಮಸ್ಯೆ ಕೂಡ ಕಾರಣ
ಇದು ಸಾಮಾನ್ಯವಾದ ಕಾರಣಗಳಾದರೆ ವಿಡಿಯೋವಿನ ಶೀರ್ಷಿಕೆಯಲ್ಲಿ ಅಚ್ಚರಿ ಎನಿಸುವ ವೈದ್ಯಕೀಯ ಕಾರಣವನ್ನು ನೀಡಿದ್ದಾರೆ.ತಲೆಹೊಟ್ಟು ಹೆಚ್ಚಾಗಲು ಊರಿಯೂತ ಸಮಸ್ಯೆಯೂ ಕಾರಣವಂತೆ. ಸೆಬೋರ್ಹೆಕ್ ಟರ್ಮಟೈಟೀಸ್ ಅಥವಾ ಬುಡದಲ್ಲಿ ಉಂಟಾಗುವ ಸೋರಿಯಾಸ್ ಸಮಸ್ಯೆ ತಲೆಹೊಟ್ಟಿಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸುತ್ತಾರೆ.
ಪ್ರತಿಯೊಬ್ಬರೂ ತಮ್ಮ ತಲೆಕೂದಲಿನ ಬುಡವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕೆಂದು ಸಲಹೆ ನೀಡುತ್ತಾರೆ. ಕೇಶಕ್ಕೆ ಸಂಬಂಧಿಸಿದ ಸೌಂದರ್ಯೋತ್ಪನ್ನವನ್ನು ಹೆಚ್ಚು ಬಳಸದಂತೆ ಸಲಹೆ ನೀಡುತ್ತಾರೆ. ಇದೆಲ್ಲಾ ಪ್ರಯತ್ನಿಸಿದ ಬಳಿಕವೂ ತಲೆಹೊಟ್ಟು ಕಂಡು ಬಂದರೆ ಚರ್ಮರೋಗ ತಜ್ಞರನ್ನು ಭೇಟಿ ಮಾಡುವಂತೆ ಸಲಹೆ ನೀಡುತ್ತಾರೆ.
•ಎಣ್ಣೆ ತಲೆಗೆ ಕಂಡೀಷ್ನರ್ನಂತೆ ವರ್ತಿಸುತ್ತದೆ. ಆದರೆ ಕೂದಲಿನ ಬೆಳವಣಿಗೆಗೆ ಕಾರಣವಾಗುವುದಿಲ್ಲ ಎನ್ನುತ್ತಾರೆ.
ಬಿಳಿಕೂದಲನ್ನು ಕೀಳುವುದರಿಂದ ಇನ್ನಷ್ಟು ನೆರೆಕೂದಲು ಬೆಳವಣಿಗೆಯಾಗುವುದಿಲ್ಲ. ಕೂದಲಿನ ಬುಡದಲ್ಲಿ ಪಿಗ್ಮೆಂಟ್ ಕಳೆದುಕೊಂಡರೆ ಮಾತ್ರ ನೆರೆಕೂದಲು ಕಾಣಿಸುತ್ತದೆ.
•ಡ್ರೈ ಶ್ಯಾಂಪೂ ಎಣ್ಣೆಯನ್ನು ಹೀರಿಕೊಳ್ಳಬಹುದು. ಆದರೆ ಕೂದಲಿನ ಬುಡವನ್ನು ಸ್ವಚ್ಚ ಮಾಡುವುದಿಲ್ಲ.
•ನೀವು ಯಾವುದೇ ಉತ್ಪನ್ನವನ್ನು ಆಯ್ಕೆ ಮಾಡುವಾಗ ನಿಮ್ಮ ತ್ವಚೆಗೆ ಹೊಂದುತ್ತದೆಯೇ ಎಂದು ಪರಿಶೀಲಿಸಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ. ಇದೇ ಸೆಷನ್ನಲ್ಲಿ ವಿವಿಧ ರೀತಿಯ ತ್ವಚೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ.