ಅಡುಗೆ ಮನೆಯಲ್ಲಿ ಮೆಂತೆಕಾಳಿನ ಉಪಯೋಗಗಳು ನಿಮಗೆ ತಿಳಿದೇ ಇದೆ. ಅದರ ಹೊರತಾಗಿ ಮೆಂತೆ ಪ್ರಯೋಜನಗಳನ್ನು ತಿಳಿಯೋಣ ಬನ್ನಿ.
ಪ್ರತಿನಿತ್ಯ ಮೆಂತೆಕಾಳನ್ನು ಸೇವಿಸುವುದರಿಂದ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಬೊಜ್ಜನ್ನು ಇಳಿಸಬಹುದು. ಒಂದು ಲೋಟ ನೀರಿಗೆ ಒಂದು ಚಮಚ ಮೆಂತ್ಯೆಯನ್ನು ಹಾಕಿ ನೆನೆಸಿ. ಬೆಳಿಗ್ಗೆ ಎದ್ದ ತಕ್ಷಣ ಮೆಂತೆ ನೀರನ್ನು ಸೇವಿಸಿ.
ಮೆಂತೆ ಅನ್ನು ನೆನೆಸಿಟ್ಟು ಮರುದಿನ ಬೆಳಿಗ್ಗೆ ಅದರ ಪೇಸ್ಟ್ ತಯಾರಿಸಿ, ಅದಕ್ಕೆ ಸ್ವಲ್ಪ ಅಲೋವೆರಾ ಜೆಲ್ ಮತ್ತು ಕೊಬ್ಬರಿ ಎಣ್ಣೆಯನ್ನು ಮಿಶ್ರಣಮಾಡಿ ನಿಮ್ಮ ತಲೆಗೆ ಹಚ್ಚುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ ಮತ್ತು ಕೂದಲು ಉದುರುವಿಕೆ ಸಮಸ್ಯೆ ಇದ್ದರೂ ನಿಲ್ಲುತ್ತದೆ.
ಮೆಂತೆ ಪೇಸ್ಟ್ ಗೆ ಮೊಸರು ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ತ್ವಚೆಗೆ ಹೊಳಪು ಬರುತ್ತದೆ ಮಾತ್ರವಲ್ಲ ತ್ವಚೆ ಮೃದುವಾಗುತ್ತದೆ.