ಬೆಂಗಳೂರು: ಬೆಲ್ಲಿ ಫ್ಯಾಟ್ ಕರಗಿಸಿ ಬಳುಕುವ ಸೊಂಟ ಬೇಕೆಂದರೆ ಹೆಚ್ಚು ಕಷ್ಟಪಡಬೇಕಾಗಿಲ್ಲ. ನಾವು ಸೇವಿಸುವ ಆಹಾರದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಸಾಕು.
ಸಕ್ಕರೆಗೆ ನೋ ಹೇಳಿ
ಸಕ್ಕರೆ ಹೆಚ್ಚು ಸೇವಿಸುತ್ತಿದ್ದರೆ ತೂಕ ಹೆಚ್ಚುವುದಕ್ಕೆ ರಹದಾರಿ. ಸಂಸ್ಕರಿತ ಸಕ್ಕರೆ ಕೊಬ್ಬು ಶೇಖರಣೆಗೆ ಕಾರಣವಾಗುತ್ತದೆ. ಹಾಗಾಗಿ ಸಕ್ಕರೆ ಆದಷ್ಟು ಕಡಿಮೆ ಸೇವಿಸಿ..
ಪೋಷಕಾಂಶ
ಪೋಷಕಾಂಶ ಭರಿತ ಆಹಾರ ಸೇವನೆಯಿಂದ ಬೆಲ್ಲಿ ಫ್ಯಾಟ್ ಕರಗಿಸಬಹುದು. ಆದಷ್ಟು ಮಜ್ಜಿಗೆ, ಮೊಟ್ಟೆ ಮುಂತಾದ ಆಹಾರಗಳನ್ನು ಸೇವಿಸಿ.
ಚಹಾ ಸೇವಿಸಿ
ಗ್ರೀನ್ ಟೀ ಮಾತ್ರವಲ್ಲ, ಪುದೀನಾ ಟೀ, ಜಿಂಜರ್ ಟೀ ಕುಡಿದರೂ ಬೆಲ್ಲಿ ಫ್ಯಾಟ್ ಕರುಗುವುದು ಗ್ಯಾರಂಟಿ. ಚಹಾದಲ್ಲಿ ಕೊಬ್ಬು ಕರಗಿಸುವ ಅಂಶವಿದೆ.
ನಾರಿನಂಶವಿರಲಿ
ನಾರಿನಂಶ ಹೆಚ್ಚಿರುವ ಆಹಾರ ನಮ್ಮ ಜೀರ್ಣಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಇದರಿಂದ ಸಹಜವಾಗಿ ಬೇಡದ ಕೊಬ್ಬು ಕರಗಿ ಬಳುಕುವ ಮೈ ನಿಮ್ಮದಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ