Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಾಯಿ ಹುಣ್ಣಿಗೆ ಇಲ್ಲಿದೆ ಸುಲಭ ಮನೆಮದ್ದು

ಬಾಯಿ ಹುಣ್ಣಿಗೆ ಇಲ್ಲಿದೆ ಸುಲಭ ಮನೆಮದ್ದು
ಬೆಂಗಳೂರು , ಬುಧವಾರ, 27 ಡಿಸೆಂಬರ್ 2017 (06:46 IST)
ಬೆಂಗಳೂರು: ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ, ಉಷ್ಣತೆ ಜಾಸ್ತಿಯಾದಾಗ  ಬಾಯಿಯಲ್ಲಿ ಹುಣ್ಣಾಗುತ್ತದೆ. ಬಾಯಿಯಲ್ಲಿ ಹುಣ್ಣಾದರೆ ಯಾವುದೇ ಆಹಾರವನ್ನು ತಿನ್ನಲು ಕಷ್ಟವಾಗುತ್ತದೆ. ಅದರಲ್ಲೂ ಉಪ್ಪು, ಹುಳಿ, ಖಾರ ಗಳನ್ನು ಬಾಯಿಗೆ ಹಾಕಲು ಸಾಧ್ಯವಾಗುವುದಿಲ್ಲ. ಈ ಬಾಯಿ ಹುಣ್ಣಿನ್ನು ಕೆಲವು ಮನೆಮದ್ದಿನಿಂದ ನಿವಾರಿಸಬಹುದು.


ಬಸಳೆಸೊಪ್ಪು-2 ತೆಗೆದುಕೊಂಡು ಚೆನ್ನಾಗಿ ಅಗೆದು ತಿನ್ನಬೇಕು. ಇದನ್ನು ದಿನದಲ್ಲಿ 3-4 ಬಾರಿ ಮಾಡಬೇಕು. ಇದರಿಂದ ಬಾಯಿಹುಣ್ಣು 2 ದಿನದಲ್ಲಿ ಕಡಿಮೆಯಾಗುತ್ತದೆ. ಹಾಗೆ 1 ಚಮಚ  ಜೀರಿಗೆಯನ್ನು ಅಗೆದು ತಿನ್ನವುದರಿಂದಲೂ ಬಾಯಿಹುಣ್ಣು ಕಡಿಮೆಯಾಗುತ್ತದೆ. ಹಾಗೆ ತುಳಸಿ ಎಲೆ 4-5 ನ್ನು ಚೆನ್ನಾಗಿ ಅಗೆದು ತಿಂದರೂ ಕೂಡ ಹುಣ್ಣು ಹೋಗುತ್ತದೆ.


ಜೇನುತುಪ್ಪವನ್ನು ಹುಣ್ಣಾಗಿರುವ ಜಾಗದಲ್ಲಿ ಹಚ್ಚಿ 10 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆದರೆ ಅದರ ಉರಿ ಕಡಿಮೆಯಾಗುತ್ತದೆ. ಗಾಯ ಇನ್ನೂ ಬೇಗ ವಾಸಿಯಾಗಬೇಕೆಂದರೆ 1 ಚಮಚ ಜೇನುತುಪ್ಪಕ್ಕೆ  ½ ಚಮಚ ಅರಶಿನವನ್ನು ಮಿಕ್ಸ್ ಮಾಡಿ ಗಾಯವಾಗಿರುವ ಜಾಗಕ್ಕೆ ಹಚ್ಚಿ 10-15 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಇದನ್ನು ದಿನಕ್ಕೆ 3-4 ಬಾರಿ ಮಾಡಬೇಕು

.    
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ಸುತ್ತಲಿರುವ ಕಪ್ಪು ವರ್ತುಲ ಹೊಗಲಾಡಿಸಲು ಸರಳ ವಿಧಾನ