ಬೆಂಗಳೂರು: ಭಾವನಾತ್ಮಕವಾಗಿ ತುಂಬಾ ಅಟ್ಯಾಚ್ ಆಗಿರದೇ ಇರುವ ಪುರಷರೂ ಸೆಕ್ಸ್ ವಿಚಾರಕ್ಕೆ ಬಂದರೆ ಸಂಪೂರ್ಣವಾಗಿ ಬದಲಾಗಿರುತ್ತಾರೆ. ಹಾಗಾಗಿ ಸೆಕ್ಸ್ ಗೆ ಮೊದಲು ಮಹಿಳೆಯರು ಕೆಲವು ವಿಚಾರಗಳನ್ನು ತಿಳಿದುಕೊಳ್ಳಲೇಬೇಕು.
ಕೈಲಾಗದೇ ಇದ್ದಾಗ ನಿಮ್ಮನ್ನು ದೂಷಿಸಬಹುದು!
ಪುರುಷರಿಗೆ ಸಂಗಾತಿಯನ್ನು ಉದ್ರೇಕಿಸಲು ಸಾಧ್ಯವಾಗುತ್ತಿಲ್ಲ ಎಂದಾಗ ಸ್ವಾಭಿಮಾನ ಕೆರಳುತ್ತದೆ. ಇಂತಹ ಸಂದರ್ಭದಲ್ಲಿ ಅವರು ತಪ್ಪಿಗೆ ನಿಮ್ಮನ್ನು ಹೊಣೆ ಮಾಡಬಹುದು. ಆದರೆ ಅದನ್ನು ಗಂಭೀರವಾಗಿ ಪರಿಗಣಿಸದಿರಿ.
ಉತ್ತೇಜನ ಕೊಡುತ್ತಿರಿ
ಮಿಲನ ಕ್ರಿಯೆ ಸಂದರ್ಭದಲ್ಲಿ ನೀವು ಸ್ವಲ್ಪವೇ ಉದಾಸೀನ ತೋರಿದರೂ ಪುರುಷರು ನಿಮ್ಮ ಮೇಲೆ ಸಿಟ್ಟಿಗೇಳುತ್ತಾರೆ ಅಥವಾ ತಾವು ಸಂಗಾತಿಯನ್ನು ತೃಪ್ತಿ ಪಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೀಳರಿಮೆಗೊಳಗಾಗುತ್ತಾರೆ. ಹಾಗಾಗಿ ಮುಖದ ಮೇಲೆ ಸಂತೃಪ್ತಿಯ ಅಲೆ ಮಾಸದಂತೆ ನೋಡಿಕೊಳ್ಳಿ.
ಸಣ್ಣದೊಂದು ಹೊಗಳಿಕೆ ಇರಲಿ
ಪುರುಷರಿಗೂ ತಮ್ಮ ದೇಹದ ಮೇಲೆ ಅಭಿಮಾನವಿರುತ್ತದೆ. ಹಾಗಾಗಿ ಮಿಲನ ಕ್ರಿಯೆ ಸಂದರ್ಭ ಅವರಿಗೆ ಚಿಕ್ಕದೊಂದು ಮೆಚ್ಚುಗೆ, ಹೊಗಳಿಕೆ ಸೂಚಿಸಿ.
ನೀವೇ ಮೊದಲಿಗರಾಗಿ
ಸೆಕ್ಸ್ ವಿಚಾರದಲ್ಲಿ ಪುರುಷರೇ ಮೊದಲು ಹೆಜ್ಜೆಯಿಡಬೇಕೆಂದಿಲ್ಲ. ಮಹಿಳೆಯೂ ಆ ಕೆಲಸ ಮಾಡಬಹುದು. ಒಂದು ವೇಳೆ ಪುರುಷ ಸಂಗಾತಿ ತೊಡಗಿಸಿಕೊಳ್ಳದಿದ್ದರೆ, ಮಹಿಳೆಯೇ ಮಿಲನಕ್ರಿಯೆಗೆ ಇನಿಷಿಯೇಟಿವ್ ತೆಗೆದುಕೊಳ್ಳಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ