Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಾಫಿಯಲ್ಲಿದೆ ನೀವು ಊಹಿಸಲೂ ಆಗದ ರಹಸ್ಯ!

ಕಾಫಿಯಲ್ಲಿದೆ ನೀವು ಊಹಿಸಲೂ ಆಗದ ರಹಸ್ಯ!
Bangalore , ಸೋಮವಾರ, 14 ಆಗಸ್ಟ್ 2017 (07:20 IST)
ಬೆಂಗಳೂರು: ದಿನಕ್ಕೊಮ್ಮೆಯಾದರೂ ಒಂದು ಲೋಟ ಕಾಫಿ ಕುಡಿಯದಿದ್ದರೆ  ಏನೋ ಮಿಸ್ಸಿಂಗ್ ಅಂತ ನಿಮಗೆ ಅನಿಸಬಹುದು. ಈ ಕಾಫಿ ಎನ್ನುವ ಪಾನೀಯದ ಹಿಂದೆ ಅದೆಷ್ಟೋ ರಹಸ್ಯವಿದೆ ನಿಮಗಿದು ಗೊತ್ತಾ?

 
ಚರ್ಮದ ಕಾಂತಿಗೆ
ಕಾಫಿ ಕುಡಿಯುವುದರಿಂದ ಚರ್ಮದ ಕಾಂತಿ ವೃದ್ಧಿಸುವುದು. ಅಲ್ಲದೆ, ಇದರಲ್ಲಿ ಕ್ಯಾನ್ಸರ್ ನಿವಾರಿಸುವ ಗುಣವೂ ಇದೆ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. ಇದಲ್ಲದೆ, ಚರ್ಮ ಬಿರುಕು ಬಿಟ್ಟಂತಾಗುವುದಕ್ಕೆ, ಹಾಗೂ ಚರ್ಮದ ಅಂಗಾಂಶ ಬೆಳವಣಿಗೆಗೆ ಕಾಫಿಯನ್ನು ಫೇಸ್ ಪ್ಯಾಕ್ ನಂತೆ ಹಚ್ಚಿಕೊಂಡರೆ ಒಳ್ಳೆಯದು.

ಕಪ್ಪು ವರ್ತುಲಕ್ಕೆ
ಇಂದಿನ ಒತ್ತಡದ ಜೀವನದ ಪರಿಣಾಮ ಕಣ್ಣಿನ ಕೆಳಗೆ ಕಪ್ಪು ವರ್ತುಲವಾಗೋದು ಸಹಜ. ಅದನ್ನು ನಿವಾರಿಸಬೇಕಾದರೆ ಕಾಫಿ ಪೌಡರ್ ನ್ನು ಪೇಸ್ಟ್ ಮಾಡಿಕೊಂಡು ಕಪ್ಪು ವರ್ತುಲವಿರುವ ಭಾಗಕ್ಕೆ ಹಚ್ಚಿಕೊಂಡು 10 ನಿಮಿಷ ಬಿಟ್ಟು ತೊಳೆದುಕೊಳ್ಳಿ.

ಸೀಳು ಕೂದಲಿಗೆ
ಚರ್ಮದಂತೆಯೇ ಸೀಳು ಕೂದಲಿನ ಸಮಸ್ಯೆಗೂ ಕಾಫಿ ಪೇಸ್ಟ್ ಉತ್ತಮ ಪರಿಹಾರ ನೀಡುತ್ತದೆ. ಒದ್ದೆ ಕೂದಲಿಗೆ ಕಾಫಿ ಪೇಸ್ಟ್ ಹಚ್ಚಿಕೊಂಡು ಉತ್ತಮ ಶ್ಯಾಂಪೂವಿನಿಂದ ತೊಳೆದುಕೊಳ್ಳುವುದರಿಂದ ಸೀಳು ಕೂದಲು ನಿವಾರಣೆಯಾಗುವುದಲ್ಲದೆ, ಕೂದಲಿನ ಅಂಗಾಂಶಗಳ ಬೆಳವಣಿಗೆಗೂ ಸಹಕರಿಸುತ್ತದೆ.

ಇದನ್ನೂ ಓದಿ.. ಚೀನಾ ಅಧಿಕಾರಿಗಳಿಗೆ ಭಾರತೀಯನಿಗೆ ಅವಮಾನ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತುಳಸಿ ಎಲೆಯನ್ನು ಜಗಿಯಬಾರದು ಏಕೆ?