ಬೆಂಗಳೂರು: ತಲೆನೋವು, ಬಂದರೆ, ಗಾಯವಾದರೆ ತಕ್ಷಣ ಆ ಭಾಗಕ್ಕೆ ಐಸ್ ಇಟ್ಟು ಮಸಾಜ್ ಮಾಡಲು ಸಲಹೆ ನೀಡುತ್ತೇವೆ. ಈ ಐಸ್ ಮಸಾಜ್ ನಮ್ಮ ಸೌಂದರ್ಯ ವೃದ್ಧಿಗೂ ಉಪಕಾರಿ. ಅದು ಹೇಗೇ? ಇಲ್ಲಿ ನೋಡಿ.
ಕಣ್ಣಿನ ಕಾಂತಿಗೆ
ದಿನವಿಡೀ ಕಂಪ್ಯೂಟರ್, ಟಿವಿ, ಮೊಬೈಲ್ ನೋಡಿ ಅಥವಾ ಪುಸ್ತಕ ಓದಿ ಕಣ್ಣುಗಳು ಜೋತು ಬಿದ್ದಂತಾಗಿದೆಯೇ? ಕಾಂತಿ ರಹಿತವಾಗಿರುವ ಕಣ್ಣಿಗೆ ಹೊಳಪು ನೀಡಲು ಐಸ್ ಕ್ಯೂಬ್ ಬಳಸಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ.
ಮೊಡವೆಗೆ
ಹದಿಹರೆಯದವರಲ್ಲಿ ಇದೊಂದು ಬಿಡದೇ ಕಾಡುವ ಸಮಸ್ಯೆ. ಮೊಡವೆ ಸಮಸ್ಯೆಗೆ ಏನೇನೋ ಮಾಡುವ ಬದಲು, ಐಸ್ ಕ್ಯೂಬ್ ತೆಗೆದುಕೊಂಡು ಮೊಡವೆ ಇರುವ ಭಾಗದಲ್ಲಿ ಮಸಾಜ್ ಮಾಡಿಕೊಳ್ಳಿ. ಇದರಿಂದ ಕೀವಿನಂತಾಗಿರುವ ಮೊಡವೆ ಅಲ್ಲಿಗೇ ಚಿವುಟಿಕೊಳ್ಳುತ್ತದೆ.
ಚರ್ಮದ ಕಾಂತಿಗೆ
ಐಬ್ರೋ ಶೇಪ್ ಮಾಡಿದ ಮೇಲೆ ಅಥವಾ ವ್ಯಾಕ್ಸಿನ್ ಮಾಡಿದ ಮೇಲೆ ಆ ಭಾಗದಲ್ಲಿ ಉರಿ, ಊತ, ಅಥವಾ ಕೆಂಪಗಾಗುವ ಸಮಸ್ಯೆಯಿದ್ದರೆ ತಕ್ಷಣ ಆ ಭಾಗಕ್ಕೆ ಐಸ್ ಕ್ಯೂಬ್ ಬಳಸಿ ಉಜ್ಜಿಕೊಳ್ಳಿ. ಹೀಗೆ ಮಾಡುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗುವುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ