ಬೆಂಗಳೂರು: ತುಳಸಿ ಎನ್ನುವುದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮಹತ್ವದ ಸಸ್ಯ ಸಂಪತ್ತು. ಧಾರ್ಮಿಕ ಮತ್ತು ಆರೋಗ್ಯದ ಹಿನ್ನಲೆಯಲ್ಲಿ ತುಳಸಿ ನಮಗೆ ಅತ್ಯಂತ ಪ್ರಮುಖವಾಗಿದೆ.
ತುಳಸಿಯನ್ನು ಪೂಜೆಗೆ ಬಳಸುವುದಲ್ಲದೆ, ಶೀತ, ಕೆಮ್ಮುವಿನಂತಹ ಸಮಸ್ಯೆಗೂ ಬಳಸುತ್ತೇವೆ. ಅಪಾರ ಔಷಧೀಯ ಗುಣವಿರುವ ತುಳಸಿ ಗಿಡ ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ. ಆದರೆ ತುಳಸಿಯನ್ನು ಜಗಿದು ನುಂಗಬಾರದು!
ಧಾರ್ಮಿಕ ಹಿನ್ನೆಯಲ್ಲಿ ನೋಡುವುದಾದರೆ, ತುಳಸಿ ಗಿಡದಲ್ಲಿ ಭಗವಾನ್ ಮಹಾ ವಿಷ್ಣು ಪತ್ನಿ ಸಮೇತ ನೆಲೆಸಿದ್ದಾನೆ ಎಂಬ ನಂಬಿಕೆಯಿದೆ. ಹೀಗಾಗಿ ಇದನ್ನು ಜಗಿದು ನುಂಗುವುದರಿಂದ ಮಹಾವಿಷ್ಣುವಿಗೆ ಅವಮಾನ ಮಾಡಿದಂತೆ ಎನ್ನಲಾಗುತ್ತದೆ.
ವೈದ್ಯಕೀಯ ಹಿನ್ನಲೆಯಲ್ಲಿ ನೋಡುವುದಾದರೆ ತುಳಸಿಯಲ್ಲಿ ಕಬ್ಬಿಣ ಮತ್ತು ಮರ್ಕ್ಯುರಿ ಅಂಶ ಹೆಚ್ಚಿದೆ. ಜಗಿದು ತಿನ್ನುವುದರಿಂದ ಈ ಅಂಶಗಳು ಹೆಚ್ಚು ಬಿಡುಗಡೆಯಾಗುವುದು ಮತ್ತು ಇದು ನಮ್ಮ ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನಲಾಗುತ್ತದೆ. ಹಾಗಾಗಿ ಶೀತವಾದಾಗ ತುಳಸಿ ಸೇವಿಸುವವರು ಅದನ್ನು ಹಾಗೆಯೇ ನುಂಗಬೇಕು ಅಥವಾ ಚೀಪಿ ರಸ ಹೀರಿಕೊಳ್ಳಬೇಕು ಎನ್ನುತ್ತಾರೆ ತಜ್ಞರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ