Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪುರುಷರಿಗಾಗಿ ಕೆಲವು ಸೌಂದರ್ಯದ ಟಿಪ್ಸ್...

ಪುರುಷರಿಗಾಗಿ ಕೆಲವು ಸೌಂದರ್ಯದ ಟಿಪ್ಸ್...
ಬೆಂಗಳೂರು , ಶುಕ್ರವಾರ, 13 ಜುಲೈ 2018 (18:28 IST)
ಇಂದಿನ ದಿನಗಳಲ್ಲಿ ಪೂರಷರೂ ಸಹ ಮಹಿಳೆಯರಷ್ಟೇ ಸೌಂದರ್ಯ ಪ್ರಜ್ಞೆಯನ್ನು ಹೊಂದಿದ್ದಾರೆ. ಅವರಿಗಾಗೇ ಹಲವಾರು ಸೌಂದರ್ಯ ಸಾಧನಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟಿವೆ. ಹೀಗಿದ್ದರೂ ಸಹ ಹಲವರು ತಮ್ಮ ಸೌಂದರ್ಯದ ಕುರಿತು ಕಾಳಜಿವಹಿಸುವುದಿಲ್ಲ.

ಅವರಿಗೆ ಚರ್ಮದ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಅವಶ್ಯಕತೆಯಿರುತ್ತದೆ. ಕೇವಲ ಫೇಸ್‌ವಾಶ್ ಅನ್ನು ಹಾಕಿ ಮುಖ ತೊಳೆಯುವುದು ಮತ್ತು ಫೇಸ್ ಪ್ಯಾಕ್ ಹಾಕಿಕೊಳ್ಳುವುದು ಸಾಲುವುದಿಲ್ಲ. ವಾತಾವರಣದ ಬದಲಾವಣೆ ಅಥವಾ ಇನ್ನಿತರ ಬದಲಾವಣೆಗಳಿಂದ ನಿಮ್ಮ ಚರ್ಮದ ಮೇಲಾಗುವ ಪರಿಣಾಮಗಳನ್ನು ತಿಳಿದುಕೊಳ್ಳಬೇಕಾಗಿದೆ. ಅದಕ್ಕಾಗಿ ಈ ಕೆಳಗಿನ ಉಪಯುಕ್ತ ಸಲಹೆಗಳನ್ನು ಅನುಸರಿಸಿ ನೋಡಿ.
 
* ಕೂದಲನ್ನು ಸರಿಯಾಗಿ ನೋಡಿಕೊಳ್ಳಿ - ಹೇಗೆಂದರೆ ಹಾಗೆ ಗಡ್ಡ ಬಿಟ್ಟುಕೊಂಡಿದ್ದರೆ, ಕೂದಲು ಅಡ್ಡಾದಿಡ್ಡಿಯಾಗಿ ಬೆಳೆದುಕೊಂಡಿದ್ದರೆ ಅದು ಕ್ಷೌರ ಮಾಡಿಕೊಳ್ಳಲು ಮರೆತಿರುವಂತೆ ಕಾಣಿಸುತ್ತದೆ. ಆದ್ದರಿಂದ ಅದರ ಕುರಿತು ಗಮನ ನೀಡಬೇಕು. ಕತ್ತಿನ ಮೇಲೆ ಕೂದಲು ಬೆಳೆಯಲು ಅವಕಾಶ ನೀಡಬಾರದು. ಅದು ಚೆನ್ನಾಗಿ ಕಾಣಿಸುವುದಿಲ್ಲ.
 
* ನಿಮ್ಮ ಹಲ್ಲುಗಳು ಹೊಳೆಯುತ್ತಿರಲಿ ಮತ್ತು ಉಸಿರು ತಾಜಾ ಆಗಿರಲಿ - ನಿಮ್ಮ ನಗು ನಿಮ್ಮ ಸೌಂದರ್ಯವನ್ನು ಹೆಚ್ಚಿಸಲು ಬಹುಮುಖ್ಯವಾದ ಅಂಶ ಎನ್ನುವುದನ್ನು ನೆನಪಿನಲ್ಲಿಡಿ. ದುರ್ಗಂಧದಿಂದ ಕೂಡಿದ ಶ್ವಾಸ ಮತ್ತು ಹಳದಿಗಟ್ಟಿದ ಹಲ್ಲುಗಳು ನಿಮ್ಮ ಸೌಂದರ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ದಿನವೂ ನಿಮ್ಮ ಹಲ್ಲುಗಳನ್ನು ಬೆಳ್ಳಗಾಗಿಸುವ ಟೂತ್‌ಪೇಸ್ಟ್ ನಿಂದ ಉಜ್ಜಿ ಸ್ವಚ್ಛ ಮಾಡಿಕೊಳ್ಳಿ ಮತ್ತು ದಂತವೈದ್ಯರಲ್ಲಿಗೆ ಭೇಟಿ ನೀಡುತ್ತಿರಿ.
 
* ನಿಮ್ಮ ಚರ್ಮವನ್ನು ತೇವಾವಂಶಯುಕ್ತವಾಗಿ ಇರಿಸಿಕೊಳ್ಳಿ - ಚರ್ಮವನ್ನು ತೇವಾಂಶಯುಕ್ತವಾಗಿ ಇರಿಸಿಕೊಳ್ಳುವುದು ಪುರುಷರಿಗೆ ಬಹುಮುಖ್ಯ ಸೌಂದರ್ಯದ ಸಲಹೆಗಳಲ್ಲಿ ಒಂದಾಗಿದೆ. ಒರಟಾದ ಚರ್ಮದ ಸಮಸ್ಯೆ ಒಂದಾದರೆ ಒಣ ಚರ್ಮದ ಮತ್ತು ಬಿರುಕು ಬಿಡುವುದು ಇನ್ನೊಂದು ಸಮಸ್ಯೆಯಾಗಿದೆ. ನೀವು ಮೂಲಭೂತ ಮೊಯಿಶ್ಚರೈಸರ್ ಕ್ರೀಂ ಅನ್ನು ಬಳಸಿದರೆ ಅದು ನಿಮ್ಮ ಚರ್ಮವನ್ನು ಹೈಡ್ರೀಕರಿಸುತ್ತದೆ ಮತ್ತು ನೀವು ಚಿಕ್ಕವರಾಗಿ ಕಾಣಿಸುವಂತೆ ಮಾಡುತ್ತದೆ.
 
* ನಿಮ್ಮ ಕೂದಲಿಗೆ ಸರಿಹೊಂದುವ ಶಾಂಪೂ ಅನ್ನು ಬಳಸಿ - ಕಡಿಮೆ ಬೆಲೆಯಲ್ಲಿ ಸಿಗುತ್ತಿದೆಯೆಂದು ಯಾವುದೋ ಶಾಂಪೂ ಅನ್ನು ಬಳಸಬೇಡಿ. ನಿಮ್ಮ ಕೂದಲಿಗೆ ಸರಿ ಹೊಂದುವ ಶಾಂಪೂ ಅನ್ನು ಬಳಸಿ. ಅದರ ಸುಗಂಧವೊಂದೇ ಮುಖ್ಯವಲ್ಲ, ಅದರಲ್ಲಿರುವ ವಿಟಮಿನ್ ಇ ನಂತಹ ಪದಾರ್ಥಗಳನ್ನು ಹೊಂದಿರುವ ನಿಮ್ಮ ಕೂದಲನ್ನು ಪೋಷಿಸುವ ಮತ್ತು ಹೊಳಪನ್ನು ನೀಡುವ ಶಾಂಪೂ ಅನ್ನು ಹುಡುಕಬೇಕು.
 
* ಯಾವಾಗಲೂ ನಿಮ್ಮ ತಲೆ ಹಾಗೂ ಗಡ್ಡದ ಕೂದಲನ್ನು ಟ್ರಿಮ್ ಆಗಿ ಇರಿಸಿಕೊಳ್ಳಿ - ತುಂಬಾ ಜನರು ಇದರ ಕಡೆಗೆ ಗಮನ ನೀಡುವುದಿಲ್ಲ. ಕೂದಲನ್ನು ಹೇಗೆಂದರೆ ಹಾಗೆ ಬೆಳೆಸಿಕೊಳ್ಳುತ್ತಾರೆ. ಆದರೆ ನಿಮ್ಮ ಉತ್ತಮ ಶೈಲಿಯಲ್ಲಿ ಕತ್ತರಿಸಿದ ಮತ್ತು ಬಾಚಿದ ಕೂದಲು ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ.
 
* ಅನಗತ್ಯವಾದ ಕೂದಲಿನಿಂದ ಮುಕ್ತಿ ಪಡೆಯಿರಿ - ಯಾವಾಗಲೂ ನಿಮ್ಮ ಮೂಗು, ಕಿವಿಗಳಿಂದ ಹೊರಬರುತ್ತಿರುವ ಕೂದಲು ಮತ್ತು ಕಣ್ಣು ಹುಬ್ಬಿನ ಬೇಡದ ಕೂದಲನ್ನು ಟ್ರಿಮ್ ಮಾಡುತ್ತಿರಿ. ಇದನ್ನು ನೀವು ಪ್ರತಿದಿನ ಮಾಡುವ ಅಗತ್ಯವಿರುವುದಿಲ್ಲ ಮತ್ತು ಇದು ಹೆಚ್ಚು ಸಮಯವನ್ನೂ ಸಹ ತೆಗೆದುಕೊಳ್ಳುವುದಿಲ್ಲ.
 
* ಹೆಚ್ಚಾಗಿ ಜಿಮ್‌ಗೆ ಭೇಟಿ ನೀಡುತ್ತಿರಿ - ನೀವು ಜಿಮ್‌ಗೆ ಹೋಗಿ ಬೆವರಿಳಿಸಿದರೆ ಅದು ನಿಮ್ಮನ್ನು ದೈಹಿಕವಾಗಿ ಸುಂದರವಾಗಿಸುತ್ತದೆ. ವ್ಯಾಯಾಮದಿಂದಾಗಿ ನಿಮ್ಮ ರಕ್ತ ಪರಿಚಲನೆ ಉತ್ತಮವಾಗುತ್ತದೆ ಮತ್ತು ಆಂತರಿಕ ಅಂಗಗಳಿಗೆ ತಲುಪುವ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸುವುದರ ಜೊತೆಗೆ ಆರೋಗ್ಯಕರವಾದ ಗ್ಲೋ ನೀಡಲು ಸಹಾಯ ಮಾಡುತ್ತದೆ.
 
* ಯಾವಾಗಲೂ ಸನ್‌ಸ್ಕ್ರೀನ್ ಲೋಷನ್ ಅನ್ನು ಬಳಸಿ - ಹೊರಗೆ ಹೋಗುವ ಸಂದರ್ಭದಲ್ಲಿ ಪುರುಷರು ಯಾವಾಗಲೂ ಸನ್‌ಸ್ಕ್ರೀನ್ ಲೋಷನ್‌ಗಳಿಂದ ತಪ್ಪಿಸಿಕೊಳ್ಳಲು ಬಯಸುತ್ತಾರೆ. ಆದರೆ ತುಂಬಾ ಒರಟಾದ ಮತ್ತು ಶುಷ್ಕವಾದ ಚರ್ಮದ ಮೇಲೆ ಇದು ತುಂಬಾ ಪರಿಣಾಮಬೀರುತ್ತದೆ. ಇದನ್ನು ಬಳಸುವುದರಿಂದ ಯಾವುದೇ ಭಯವಿಲ್ಲದೆ ನೀವು ಪ್ರತಿದಿನ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಬಹುದಾಗಿದೆ.
 
* ಆಗಾಗ ಉಗುರುಗಳನ್ನು ಕತ್ತರಿಸಿ ಅದಕ್ಕೆ ಸರಿಯಾದ ಆಕಾರವನ್ನು ನೀಡಿ. ಉಗುರುಗಳು ಯಾವಾಗಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಆಗಾಗ ಪೆಡಿಕ್ಯೂರ್ ಮಾಡಿಸಿಕೊಳ್ಳುವುದು ಉತ್ತಮ.
 
ಸೌಂದರ್ಯ ಪ್ರಜ್ಞೆ ಎನ್ನುವುದು ಕೇವಲ ಮಹಿಳೆಯರ ಸ್ವತ್ತಲ್ಲ. ಪುರುಷರಿಗೂ ಸಹ ತಮ್ಮ ಸೌಂದರ್ಯದ ಕುರಿತು ಕಾಳಜಿ ವಹಿಸುವ ಅಗತ್ಯವಿದೆ. ನಿಮಗೆ ಈ ಸಲಹೆಗಳು ಉಪಯುಕ್ತವೆನೆಸಿದರೆ ಪ್ರಯತ್ನಿಸಿ ನೋಡಿ.

Share this Story:

Follow Webdunia kannada

ಮುಂದಿನ ಸುದ್ದಿ

ತೆಂಗಿನ ಎಣ್ಣೆಯಲ್ಲಿವೆ ಹಲವಾರು ಪ್ರಯೋಜನಗಳು...!!! ನಿಮಗೆ ಗೊತ್ತೇ?