Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಋತುಮತಿಯಾದಾಗ ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭನಿರೋಧಕ ಬೇಡವೇ?

ಋತುಮತಿಯಾದಾಗ ಲೈಂಗಿಕ ಕ್ರಿಯೆ ನಡೆಸಿದರೆ ಗರ್ಭನಿರೋಧಕ ಬೇಡವೇ?
ಬೆಂಗಳೂರು , ಶುಕ್ರವಾರ, 13 ಜುಲೈ 2018 (09:19 IST)
ಬೆಂಗಳೂರು: ಋತುಮತಿಯಾದಾಗ ಲೈಂಗಿಕ ಕ್ರಿಯೆ ನಡೆಸುವ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ಅದರಲ್ಲಿ ಕೆಳಗಿನ ಎರಡು ವಿಚಾರಗಳಲ್ಲಂತೂ ಮಹಿಳೆಯರು ತಪ್ಪು ಕಲ್ಪನೆ ಹೊಂದಿದ್ದಾರೆ.

ಋತುಮತಿಯಾದಾಗ ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬಾರದು ಎಂದಿಲ್ಲ.  ಕೆಲವು ವಿದೇಶೀ ಸಮೀಕ್ಷೆಗಳ ಪ್ರಕಾರ ಈ ಸಮಯದಲ್ಲೇ ಮಹಿಳೆಯರು ಹೆಚ್ಚು ಉದ್ರೇಕಗೊಳ್ಳುತ್ತಾರಂತೆ!

ಇನ್ನೊಂದು ತಪ್ಪು ಕಲ್ಪನೆಯೆಂದರೆ ಋತುಮತಿಯಾದಾಗ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡರೆ ಗರ್ಭನಿರೋಧಕ ಬಳಸಬೇಕಿಲ್ಲ ಎಂಬುದು. ಆದರೆ ಇದು ತಪ್ಪು ಕಲ್ಪನೆ. ಈ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ಮಾಡುವುದರಿಂದ ಗರ್ಭಿಣಿಯಾಗುವ ಸಾಧ್ಯತೆ ಕಡಿಮೆಯಾದರೂ, ಇಲ್ಲದಿಲ್ಲ. ಮಹಿಳೆಯ ಗರ್ಭಾಶಯದೊಳಗೆ ವೀರ್ಯಾಣು 48 ಗಂಟೆಗಳ ಕಾಲ ಜೀವಂತವಾಗಿರಬಹುದು. ಹಾಗಾಗಿ ಬೇಗನೇ ಅಂಡಾಣು ಉತ್ಪತ್ತಿಯಾಗುವವರಲ್ಲಿ ಗರ್ಭಿಣಿಯಾಗುವ ಸಾಧ್ಯತೆಯಿದೆ. ಹೀಗಾಗಿ ಋತುಮತಿಯಾದಾಗ ಲೈಂಗಿಕ ಕ್ರಿಯೆ ಮಾಡುವುದಿದ್ದರೂ ಗರ್ಭ ನಿರೋಧಕ ಬಳಸುವುದು ಒಳಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ನೀವು ಸ್ನಾನ ಮಾಡುವಾಗ ಈ ರೀತಿಯಾದ ತಪ್ಪುಗಳನ್ನು ಮಾಡಬೇಡಿ!