ಬೆಂಗಳೂರು: ಯಾವುದ್ಯಾವುದೋ ಕಾರಣಕ್ಕೆ ನಮ್ಮ ಪ್ರೀತಿ ಪಾತ್ರರಿಗೆ,, ಗೌರವಕ್ಕೆ ಪಾತ್ರರಾದವರಿಗೆ ಉಡುಗೊರೆಗಳನ್ನು ಕೊಡುತ್ತಿರುತ್ತೇವೆ. ಆದರೆ ನಾವು ಎಂತಹ ಉಡುಗೊರೆ ಕೊಡುತ್ತೇವೆ ಎನ್ನುವದರ ಮೇಲೆ ಅದರ ಫಲಾಫಲಗಳು ನಿರ್ಧಾರವಾಗುತ್ತದೆ.
ನಾವು ಇನ್ನೊಬ್ಬರಿಗೆ ಕೊಡುವ ಉಡುಗೊರೆಗಳು ಪ್ರೀತಿ ಅಭಿಮಾನವನ್ನು ಬೆಳೆಸುವಂತಿರಬೇಕು. ತುಳಸಿಯನ್ನು, ಪುಸ್ತಕಗಳನ್ನು, ಗುರು ದೇವತಾ ಫೋಟೋಗಳನ್ನು, ದೇವರ ಹಾಡುಗಳ ಸಿಡಿ, ಉಪನ್ಯಾಸದ ಸಿಡಿ, ದೇವರ ಪ್ರತಿಮೆಗಳನ್ನು ಉಡುಗೊರೆಯಾಗಿ ಕೊಡಬೇಕು.
ತುಳಸಿಯ ಹೂವುಗಳನ್ನು ಅರ್ಚಿಸಿದರೆ ಕೊಟ್ಟ ನಮಗೂ ಸ್ವೀಕರಿಸಿದವರಿಗೂ ಪುಣ್ಯ ಪ್ರಾಪ್ತಿಯಾಗುತ್ತದೆ. ದೇವರ ಚಿತ್ರಗಳನ್ನು ಕೊಟ್ಟಾಗ ಪ್ರತಿ ನಿತ್ಯ ಒಂದು ಬಾರಿಯಾದರೂ ಸದ್ಭಾವನೆಯಿಂದ ನಮಸ್ಕಾರ ದರ್ಶನ ಸ್ಮರಣಗಳಾಗುತ್ತವೆ. ಉಪನ್ಯಾಸದ ಸಿಡಿಗಳನ್ನು ಕೊಡುವುದರಿಂದ ಜ್ಞಾನ ಭಕ್ತಿಗಳು ಹೆಚ್ಚುತ್ತವೆ. ಇಂತಹ ಉಡುಗೊರೆಗಳು ಸಮಾಜದ ಸ್ವಾಸ್ಥ್ಯ ಹೆಚ್ಚಿಸುವುದಲ್ಲದೆ, ದೇವರಿಗೂ ಪ್ರಿಯವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ