Publish Date: Sat, 19 Jan 2019 (09:30 IST)
Updated Date: Sat, 19 Jan 2019 (09:32 IST)
ಬೆಂಗಳೂರು: ಶನಿವಾರ ಎಂಬುದು ಶನಿ ಗ್ರಹನ ವಾರ. ಈ ದಿನ ಕೆಲವು ವಸ್ತುಗಳನ್ನು ಖರೀದಿ ಮಾಡುವುದು ಮನೆಗೆ, ಮನೆಯ ಸದಸ್ಯರಿಗೆ ಅಶುಭವಾಗುತ್ತದೆ ಎಂಬ ನಂಬಿಕೆಯಿದೆ. ಅವು ಯಾವುವು ನೋಡೋಣ.
ಕಬ್ಬಿಣ
ಕಬ್ಬಿಣ ಅಥವಾ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಶನಿವಾರ ಖರೀದಿಸುವುದರಿಂದ ದುರಾದೃಷ್ಟ ಬರುತ್ತದೆ.
ಎಣ್ಣೆ
ಶನಿವಾರಗಳಂದು ಕೆಲವರು ಎಣ್ಣೆ ಹಚ್ಚಿ ಸ್ನಾನ ಮಾಡುವುದೇ ಇಲ್ಲ. ಅದೇ ರೀತಿ ಎಣ್ಣೆ ಖರೀದಿ ಮಾಡಿದರೆ ಮನೆಯ ಸದಸ್ಯರಿಗೆ ರೋಗ ಬರುತ್ತದೆ ಎಂಬ ನಂಬಿಕೆಯಿದೆ.
ಉಪ್ಪು
ಈ ದಿನ ಉಪ್ಪು ಖರೀದಿಸಿದರೆ ಜೀವನ ಪರ್ಯಂತ ಸಾಲದಲ್ಲಿ ಮುಳುಗಬೇಕಾಗುತ್ತದೆ, ಋಣ ಬಾಧೆಗೊಳಗಾಗಬೇಕಾಗುತ್ತದೆ.
ಕಸಬರಿಕೆ
ಕಸಬರಿಕೆ ಖರೀದಿ ಮಾಡುವುದರಿಂದ ಮನೆಯಲ್ಲಿ ಋಣಾತ್ಮಕ ಪ್ರಭಾವ ಹೆಚ್ಚಿ, ದಾರಿದ್ರ್ಯ ಸೃಷ್ಟಿಯಾಗುತ್ತದೆ.
ಶಾಯಿ
ಶನಿವಾರಗಳಂದು ಪುಸ್ತಕ ಮತ್ತಿತರ ಬರೆಯುವ ಸಾಧನಗಳನ್ನು ಖರೀದಿಸಬಹುದು. ಆದರೆ ಶಾಯಿ ಖರೀದಿಸುವುದರಿಂದ ಮನೆಯಲ್ಲಿ ವಿರಸವುಂಟಾಗುತ್ತದೆ.
ಇಂಧನ
ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆಯಂತಹ ಇಂಧನಗಳನ್ನು ಖರೀದಿಸುವುದರಿಂದ ಮನೆಯೊಳಗೆ ಕಲಹ ಹೆಚ್ಚುವುದು.
ಶೂ ಖರೀದಿ
ಈ ದಿನ ಶೂ ಖರೀದಿ ಮಾಡುವುದರಿಂದ ನೀವು ಕೈಗೊಂಡ ಕಾರ್ಯಗಳಲ್ಲಿ ಸೋಲನುಭವಿಸುವಿರಿ.
ಕಪ್ಪು ಎಳ್ಳು
ಈ ದಿನ ಕಪ್ಪು ಎಳ್ಳು ದಾನ ಮಾಡುವುದೇನೋ ಒಳ್ಳೆಯದೇ. ಆದರೆ ಈ ದಿನ ಕಪ್ಪು ಎಳ್ಳು ಖರೀದಿ ಮಾಡಿದರೆ ಜೀವನದಲ್ಲಿ ಸಮಸ್ಯೆಗಳನ್ನು ಆಹ್ವಾನಿಸಿದಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ